August 12, 2026

ವಿಟ್ಲ: ಅನ್ಯಕೋಮಿನ ಯುವತಿಯರ ಜತೆ ಯುವಕ ಪತ್ತೆ: ಮೂವರು ಪೊಲೀಸ್ ವಶಕ್ಕೆ

0
IMG-20220615-WA0046

ವಿಟ್ಲ: ಅನ್ಯಕೋಮಿನ ಯುವತಿಯರ ಜತೆ ಯುವಕ ಇದ್ದ ಘಟನೆ ಕುಡ್ತಮುಗೇರು ಪಡಾರು ಸಮೀಪದ ಬೊಳ್ಪಾದೆ ಎಂಬಲ್ಲಿ ನಡೆದಿದೆ.

ಹಿಂದೂ‌ ಮತ್ತು ಕ್ರಿಶ್ಚಿಯನ್ ಸಮುದಾಯದ ಇಬ್ಬರು ಯುವತಿಯರು ಮತ್ತು ಓರ್ವ ಮುಸ್ಲಿಂ ಯುವಕ ಜೊತೆಯಾಗಿ ಇದ್ದ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಅವರನ್ನು ಹಿಡಿದು ವಿಚಾರಿಸಿದ್ದಾರೆ.ಬಳಿಕ ವಿಟ್ಲ ಪೊಲೀಸರ ವಶಕ್ಕೆ ಮೂವರನ್ನು ಒಪ್ಪಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೆಲಸ ಕೊಡಿಸುವ ನೆಪದಲ್ಲಿ ಕರೆತಂದಿರುವ ಆರೋಪವನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು ಮಾಡಿದ್ದಾರೆ. ಯುವತಿಯರು ಕೇರಳ ಮೂಲದವರು ಎಂದು ಕೂಡ ಹೇಳಲಾಗಿದೆ. ಮಂಗಳೂರಿನಲ್ಲಿ ಸಂದರ್ಶನಕ್ಕೆಂದು ಬಂದವರು ಬೊಲ್ಪಾದೆ ಸಮೀಪದ ಸ್ನೇಹಿತರ ಮನೆಗೆ ಬಂದಿದ್ದೇವೆ ಎಂದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!