February 4, 2026

ಮಹಿಳಾ ವಕೀಲೆಯ ಮೇಲೆ ದುಷ್ಕರ್ಮಿಯಿಂದ ಹಲ್ಲೆ: ಆಸ್ಪತ್ರೆಗೆ ದಾಖಲು

0
image_editor_output_image248842736-1663561384192.jpg

ಚೆನ್ನೈ: ಹಾಡಗಹಲಲ್ಲೇ ಮಹಿಳಾ ವಕೀಲೆಯೊಬ್ಬರ ಮೇಲೆ ದುಷ್ಕರ್ಮಿಯೋರ್ವ ಕುಡುಗೋಲಿನಿಂದ ಅಮಾನುಷವಾಗಿ ಹಲ್ಲೆ ನಡೆಸಿದ್ದು, ಮಹಿಳೆಯ ಮುಖ ಹಾಗೂ ಕೈಗಳಿಗೆ ಗಂಭೀರವಾಗಿ ಗಾಯವಾಗಿ ರಕ್ತಸ್ರಾವವಾಗಿದೆ.

ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಮಹಿಳೆಯನ್ನು  ಕುಮಾರನ್ ಸಲೈನಲ್ಲಿರುವ ಮಹಿಳಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಜಮೀಲಾ ಬಾನು ಎಂದು ಗುರುತಿಸಲಾಗಿದೆ.

ತಾವು ನಿರ್ವಹಿಸುತ್ತಿರುವ ಹಿಂದಿನ ಪ್ರಕರಣಗಳ ಬಗ್ಗೆ ಕೆಲವು ಫೈಲ್‍ಗಳನ್ನು ತೆಗೆದುಕೊಳ್ಳಲು ಅವರು ತಮ್ಮ ಮಗಳೊಂದಿಗೆ ವಕೀಲರ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ ಏಕಾಏಕಿ ಕಚೇರಿಗೆ ನುಗ್ಗಿದ ವ್ಯಕ್ತಿಯೋರ್ವ ಜಮೀಲಾ ಬಾನು ಅವರ ಮೇಲೆ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ. ಇದೇ ವೇಳೆ ತಾಯಿಯನ್ನು ರಕ್ಷಿಸಲು ಬಂದ ಮಗಳು ಕೂಡ ಗಾಯಗೊಂಡಿದ್ದಾರೆ. 

Leave a Reply

Your email address will not be published. Required fields are marked *

You may have missed

error: Content is protected !!