ಪರೀಕ್ಷೆ ಬರೆಯಲು ಉಕ್ಕಿ ಹರಿಯುತ್ತಿದ್ದ ನದಿಯನ್ನು ಈಜಿ ದಾಟಿದ ಯುವತಿ
ವಿಜಯನಗರಂ: ಪರೀಕ್ಷೆ ಬರೆಯಲು ಹೋಗಲು 21 ವರ್ಷದ ಯುವತಿಯೊಬ್ಬರು ಉಕ್ಕಿ ಹರಿಯುತ್ತಿದ್ದ ನದಿಯನ್ನು ಈಜಿ ದಾಟಿದ ಘಟನೆ ಆಂಧ್ರ ಪ್ರದೇಶದ ವಿಜಯನಗರಂ ನಲ್ಲಿ ಶುಕ್ರವಾರ ನಡೆದಿದೆ.
ಗಜಪತಿನಗರಂ ಮಂಡಲದ ಮರಿವಲಸ ಗ್ರಾಮದ ತಡ್ಡಿ ಕಲಾವತಿ ಎಂಬಾಕೆಯೇ ಈಜಿ ನದಿ ದಾಟಿದ ಯುವತಿ. ಈಕೆ ಶುಕ್ರವಾರ ಚಂಪಾವತಿ ನದಿಯನ್ನು ಈಜಿದ್ದಾರೆ.
ಶನಿವಾರ ನಡೆಯಬೇಕಿದ್ದ ಪರೀಕ್ಷೆಗೆ ಹಾಜರಾಗಲೆಂದು ಜೀವವನ್ನೇ ಪಣಕ್ಕಿಟ್ಟು ಕಲಾವತಿ ತನ್ನ ಇಬ್ಬರು ಸಹೋದರರ ನೆರವಿನೊಂದಿಗೆ ಪ್ರವಾಹಕ್ಕೆ ಸಿಲುಕಿದ ಚಂಪಾವತಿ ನದಿಯನ್ನು ದಾಟಿದ್ದಾಳೆ.
35 ಸೆಕೆಂಡುಗಳ ಸುದೀರ್ಘ ವೀಡಿಯೊದಲ್ಲಿ, ಕಲಾವತಿಯ ಸಹೋದರರು ಅವಳನ್ನು ತಮ್ಮ ಭುಜದ ಮೇಲೆ ಹೊತ್ತುಕೊಂಡು ನದಿಯ ಇನ್ನೊಂದು ಬದಿಗೆ ಕರೆದುಕೊಂಡು ಬರುವುದನ್ನು ಕಾಣಬಹುದು.




