ಶಾಲಾ ಸಮವಸ್ತ್ರದಲ್ಲೇ ಮೂತ್ರ ಮಾಡಿದ ಬಾಲಕ: 8 ವರ್ಷದ ಬಾಲಕನ ಮೇಲೆ ಬಿಸಿನೀರು ಸುರಿದು ವಿಕೃತಿ ಮೆರೆದ ಶಿಕ್ಷಕ
ರಾಯಚೂರು: ಶಾಲಾ ಸಮವಸ್ತ್ರದಲ್ಲೇ ಬಾಲಕ ಮಲ ವಿಸರ್ಜನೆ ಮಾಡಿಕೊಂಡಿದ್ದಕ್ಕೆ ಸಿಟ್ಟಾದ ಶಿಕ್ಷಕ 8 ವರ್ಷದ ಬಾಲಕನ ಮೇಲೆ ಬಿಸಿನೀರು ಸುರಿದು ವಿಕೃತಿ ಮೆರೆದಿರುವ ಘಟನೆ ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ನಡೆದಿದೆ.
ಮಸ್ಕಿಯ ಸಂತೆಕೆಲ್ಲೂರು ಗ್ರಾಮದಲ್ಲಿ 2ನೇ ತರಗತಿಯ ವಿದ್ಯಾರ್ಥಿ ಅಖಿತ್ (8)ಗೆ ಗಂಭೀರ ಗಾಯಗಳಾಗಿದ್ದು, ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ಮಿಟ್ಟಿಕೆಲ್ಲೂರು ಮೂಲದ ಗ್ರಾಮದ ವಿದ್ಯಾರ್ಥಿ ಶಾಲೆಗೆ (School) ಹೋದಾಗ ಶಾಲಾ ಸಮವಸ್ತ್ರದಲ್ಲೇ ವಿದ್ಯಾರ್ಥಿ ಮಲ ವಿಸರ್ಜನೆ ಮಾಡಿಕೊಂಡಿದ್ದಾನೆ. ಇದರಿಂದ ಗರಂ ಆದ ಶಿಕ್ಷಕ ವಿದ್ಯಾರ್ಥಿ ಮೇಲೆ ಬಿಸಿ ನೀರು ಎರಚಿದ್ದು, ಮಗುವಿನ ದೇಹದ ಶೇ.40ರಷ್ಟು ಭಾಗ ಬೆಂದು ಗಂಭೀರ ಗಾಯಗಳಾಗಿವೆ.




