ಕೊಡಂಗಾಯಿ ಮುಹ್ಯಿದ್ಧೀನ್ ಜುಮಾ ಮಸ್ಜಿದ್ ಆಡಳಿತ ಸಮಿತಿಯ ಅಧ್ಯಕ್ಷರಾಗಿ ಎ ಎಂ ಮಹಮ್ಮದ್ ಕುಂಞ: ಪ್ರಧಾನ ಕಾರ್ಯದರ್ಶಿಯಾಗಿ ಸಿ ಎಚ್ ಅಬ್ದುಲ್ ಖಾದರ್ ಪುನರಾಯ್ಕೆ
ವಿಟ್ಲ: ಕೊಡಂಗಾಯಿ ಮುಹ್ಯಿದ್ಧೀನ್ ಜುಮಾ ಮಸ್ಜಿದ್ ಇದರ
2020/21ನೇ ಸಾಲಿನ
ವಾರ್ಷಿಕ ಮಹಾಸಭೆಯು ದಿನಾಂಕ 05-11-2021ರಂದು ಸದ್ರಿ ಜಮಾಅತಿನ ಗೌರವಾಧ್ಯಕ್ಷರಾದ ಅಸ್ಸಯ್ಯದ್ ಪೂಕುಂಞ ತಂಙಳ್ ಉದ್ಯಾವರ ಅವರ ಅಧ್ಯಕ್ಷತೆಯಲ್ಲಿ ಸದ್ರಿ ಮಸೀದಿ ಸಭಾಂಗಣದಲ್ಲಿ ಜರಗಿತು.
2020/21 ನೇ ಸಾಲಿನ ಜಮಾ ಖರ್ಚಿನ ವಿವರವನ್ನು ಕಾರ್ಯದರ್ಶಿಯವರು ಸಭೆಯಲ್ಲಿ ಮಂಡಿಸಿದ್ದು ಸಭೆಯು ಸರ್ವಾನುಮತದಿಂದ ಅಂಗೀಕರಿಸಿತ್ತು.
ಪ್ರಸ್ತುತ ಜಮಾಅತ್ ಕಮಿಟಿಯ ಗೌರವಾಧ್ಯಕ್ಷರಾಗಿ ಅಸ್ಸಯ್ಯದ್ ಪೂಕುಂಞ ತಂಙಳ್ ಉದ್ಯಾವರ
ಅಧ್ಯಕ್ಷರಾಗಿ: ಎ ಎಂ ಮುಹಮ್ಮದ್ ಕುಂಞ, ಪ್ರಧಾನ ಕಾರ್ಯದರ್ಶಿಯಾಗಿ: ಸಿ ಎಚ್ ಅಬ್ದುಲ್ ಖಾದರ್ ಚನಿಲ, ಕೋಶಾಧಿಕಾರಿಯಾಗಿ: ಹಕೀಂ ಮಾಡಾವು ಉಪಾಧ್ಯಕ್ಷರಾಗಿ: ಹನೀಫ್ ಪರ್ಲಾರ್, ಜೊತೆ ಕಾರ್ಯದರ್ಶಿಯಾಗಿ: ಹುಸೈನ್ ಪಿ, ಹಾಗೂ 24 ಸದಸ್ಯರನ್ನೊಳಗೊಂಡ ಸಮಿತಿಯನ್ನು ಪುನರಾಯ್ಕೆ ಗೊಳಿಸಲಾಯಿತ್ತು.
ಸಭೆಯಲ್ಲಿ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತ್ತು
ಕೊನೆಯಲ್ಲಿ ಮೂರು ಸ್ವಲಾತಿನೊಂದಿಗೆ ಸಭೆಯು ಮುಕ್ತಾಯಗೊಂಡಿತು.