February 3, 2026

ಭಟ್ಕಳ: ಉದ್ಯಮಿ ಮಗನ ಅಪಹರಣ, ಕಾರಿನಲ್ಲಿ ಬಂದು ಕೃತ್ಯ

0
image_editor_output_image-10542182-1661071121305.jpg

ಭಟ್ಕಳ: ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಆಜಾದ್ ನಗರದ ಕೊಕ್ತಿ ಸಮೀಪ, ಶನಿವಾರ ರಾತ್ರಿ ಅಂಗಡಿಯಿಂದ ಬ್ರೆಡ್ ಖರೀದಿ ಮಾಡಿ ಮನೆಗೆ ಮರಳುತ್ತಿದ್ದ ಎಂಟು ವರ್ಷದ ಬಾಲಕನನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

ಕೊಕ್ತಿ ಆಜಾದ ನಗರ ನಿವಾಸಿ ಅಲಿ ಸಾದಾ ಇಸ್ಲಾಂ ಸಾದಾ ಅಪಹರಣವಾದ ಬಾಲಕ. ಈತನ ತಂದೆ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಶನಿವಾರ ಸಂಜೆಯಿಂದ ಬಾಲಕನ ಮನೆ ಮುಂದೆ ಅಪರಿಚಿತ ಕಾರೊಂದು ಸಂಚರಿಸುತ್ತಿದ್ದ ದೃಶ್ಯ ಹಾಗೂ ಕಾರಿನಲ್ಲಿ ಬಾಲಕನನ್ನು ಅಪಹರಣ ಮಾಡಿಕೊಂಡು ಹೋಗಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿದೆ.

ಭಟ್ಕಳ ಶಹರ ಠಾಣೆ ಸಿ.ಪಿ.ಐ ದಿವಾಕರ ಅವರ ನೇತೃತ್ವದಲ್ಲಿ ಬಾಲಕನ ರಕ್ಷಣೆಗೆ ಹಾಗೂ ಅಪಹರಣಕಾರರ ಪತ್ತೆಗೆ ಹುಡುಕಾಟ ಆರಂಭವಾಗಿದೆ. ಭಾನುವಾರ ಬೆಳಿಗ್ಗೆಯವರೆಗೂ ಆರೋಪಿಗಳು ಪತ್ತೆಯಾಗಿಲ್ಲ. ಅಪರಹಣದ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತಯೇ ಆಜಾದ್ ನಗರ ಸುತ್ತಮತ್ತ ಜನ ಜಮಾವಣೆಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!