March 25, 2026

ಉಪ್ಪಿನಂಗಡಿ: ಹನಿಟ್ರ್ಯಾಪ್, ಪೊಲೀಸ್ ದೂರು ನೀಡಿದ ಸಾಮಾಜಿಕ ಮುಖಂಡ

0
image_editor_output_image-1232483039-1660723605894.jpg

ಉಪ್ಪಿನಂಗಡಿ: ಫೋನ್ ಕರೆಗಳ ಮೂಲಕ ಅಶ್ಲೀಲ ಮಾತುಗಳ್ನಾಡಿ ಹನಿಟ್ರ್ಯಾಪ್ ಮಾಡಲೆತ್ನಿಸಿದ ಬಗ್ಗೆ ಸಾಮಾಜಿಕ ಮುಖಂಡರೊಬ್ಬರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆಯೊಬ್ಬರು ಉಪ್ಪಿನಂಗಡಿಯ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಮುಂದಾಳು ಓರ್ವರಿಗೆ ಕರೆ ಮಾಡಿ ಅಸಭ್ಯವಾಗಿ ತೀರಾ ಮುಜುಗರಕ್ಕೀಡು ಮಾಡುವಂತೆ ಮಾತನಾಡಿದ್ದಳು.

ಆಕೆಯ ಮಾತಿಗೆ ನಡೆಗೆ ತೀಕ್ಷ್ಣವಾದ ಮಾತುಗಳಿಂದ ಆಕ್ಷೇಪವೆತ್ತಿದರೂ ಪದೇ ಪದೇ ಮೂರ್ನಾಲ್ಕು ಬಾರಿ ಕರೆ ಮಾಡಿ ವಿಕೃತ ವರ್ತನೆ ತೋರಿದಾಗ ಇದೊಂದು ಹನಿಟ್ರ್ಯಾಪ್ ಬ್ಲ್ಯಾಕ್‌ಮೇಲ್ ದಂಧೆಯ ಕೃತ್ಯ ಎಂದು ಶಂಕಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ದೂರು ಸ್ವೀಕರಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!