March 25, 2026

ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಗೆ 135 ರೂ. ಇಳಿಕೆ: ಇಂದಿನಿಂದಲೇ ಅನ್ವಯ

0
image_editor_output_image1961107911-1654064313061.jpg

ನವದೆಹಲಿ: ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಬುಧವಾರ (ಜೂನ್ 1) ದಿಂದ ಅನ್ವಯವಾಗುವಂತೆ 135 ರೂಪಾಯಿಯಷ್ಟು ಇಳಿಕೆ ಮಾಡಲಾಗಿದೆ ಎಂದು ತೈಲ ಮಾರಾಟ ಕಂಪನಿಗಳು ಘೋಷಿಸಿವೆ.

ಇಂದಿನಿಂದ ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ 135 ರೂಪಾಯಿ ಇಳಿಕೆಯಾಗಿದ್ದು, ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 2,300 ರೂಪಾಯಿಗೆ ಇಳಿಕೆಯಾಗಿದೆ.

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ವಾಣಿಜ್ಯ ಬಳಕೆಯ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ ಇದೀಗ 2,219 ರೂಪಾಯಿಗೆ ಇಳಿಕೆಯಾಗಿದ್ದು, ಈ ಮೊದಲು ಪ್ರತಿ ಸಿಲಿಂಡರ್ ಬೆಲೆ 2,354ರೂಪಾಯಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು.

Leave a Reply

Your email address will not be published. Required fields are marked *

error: Content is protected !!