March 25, 2026

ಮಂಗಳೂರು: ಇಂದಿನಿಂದ ಜು. 31ರವರೆಗೆ ಯಾಂತ್ರಿಕ ಮೀನುಗಾರಿಕೆಗೆ ನಿಷೇಧ

0
image_editor_output_image-1649801782-1654063144378.jpg

ಮಲ್ಪೆ/ಮಂಗಳೂರು: ರಾಜ್ಯ ಸರಕಾರ ಯಾಂತ್ರಿಕ ಮೀನುಗಾರಿಕೆಗೆ ಜೂ. 1ರಿಂದ ಜು. 31ರ ವರೆಗೆ ನಿಷೇಧ ಹೇರಿರುವ ಹಿನ್ನೆಲೆಯಲ್ಲಿ ಎಲ್ಲ ಯಾಂತ್ರಿಕ ಮೀನುಗಾರರು ತಮ್ಮ ಬೋಟುಗಳನ್ನು ದಡ ಸೇರಿಸುತ್ತಿದ್ದಾರೆ.

ಬುಧವಾರ ಈ ಋತುವಿನ ಯಾಂತ್ರಿಕ ಮೀನುಗಾರಿಕೆಗೆ ಅಧಿಕೃತ ತೆರೆ ಬೀಳಲಿದೆ. ಎಪ್ರಿಲ್‌, ಮೇ ತಿಂಗಳು ವಿಪುಲ ವಾಗಿ ಮೀನುಗಾರಿಕೆ ನಡೆಸುವ ಸಮಯ. ಆಗ ಅತ್ಯಧಿಕ ಸ‌ಂಖ್ಯೆಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಕೆಲವು ವರ್ಷಗಳಿಂದ ಸಿಗದ ಬೂತಾಯಿ, ಬಂಗುಡೆ ಮತ್ತು ಬೊಂಡಾಸ್‌ ಮೀನುಗಳು ಈ ಬಾರಿ ಕಾಣಸಿಕ್ಕಿವೆ. ಆದರೆ ಏರುತ್ತಿರುವ ಡೀಸೆಲ್‌ ದರ ಮೀನು ಗಾರಿಕೆಗೆ ತಡೆಯೊಡ್ಡಿದೆ. ನಷ್ಟದ ಭೀತಿಯಲ್ಲಿ ಮಾಲಕರು ಬೋಟುಗಳನ್ನು ಲಂಗರು ಹಾಕಿದ್ದಾರೆ.

Leave a Reply

Your email address will not be published. Required fields are marked *

error: Content is protected !!