March 19, 2026

ಪ್ರೀತಿ ವಿಚಾರ: ಯುವತಿಯ ಮೇಲೆ‌ ಆ್ಯಸಿಡ್ ಎರಚಿದ ಯುವಕ

0
Screenshot_2022-04-28-11-37-17-25_680d03679600f7af0b4c700c6b270fe7.jpg

ಬೆಂಗಳೂರು: ನಗರದ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಯುವತಿಯೊಬ್ಬರ ಮೇಲೆ‌ ಆ್ಯಸಿಡ್ ಎರಚಲಾಗಿದ್ದು, ಗಾಯಗೊಂಡಿರುವ ಯುವತಿ‌ಯನ್ನು ವಿಕ್ಟೋರಿಯಾ ಆಸ್ಪತ್ರೆಗೆ‌ ದಾಖಲಿಸಲಾಗಿದೆ.

ಫೈನಾನ್ಸ್ ಕಂಪನಿ‌ ಕಚೇರಿಯೊಂದರ ಬಳಿ‌ ಈ ಘಟನೆ ನಡೆದಿದೆ. ಯುವತಿ ಆರೋಗ್ಯದಲ್ಲಿ‌ ಚೇತರಿಕೆ ಕಂಡುಬಂದಿದೆ.

‘ಪ್ರೀತಿ‌ ವಿಚಾರವಾಗಿ‌ ಯುವಕನೊಬ್ಬ ಯುವತಿ‌ ಹಿಂದೆ‌ ಬಿದ್ದಿದೆ. ಇದೇ‌ ವಿಚಾರವಾಗಿ‌ ಪರಸ್ಪರ‌ ಗಲಾಟೆಯೂ ಆಗಿತ್ತು. ಅದೇ ಕೋಪದಲ್ಲೇ ಯುವಕ, ಗುರುವಾರ ಬೆಳಿಗ್ಗೆ ಯುವತಿ‌ ಮೇಲೆ ಆ್ಯಸಿಡ್ ಎರಚಿ‌ದ್ದಾನೆ’ ಎಂದು ಪೊಲೀಸರು ಹೇಳಿದರು.

‘ಯುವಕ‌ ಹಾಗೂ ಯುವತಿ‌‌ ಪರಿಚಯಸ್ಥರು. ಯುವತಿ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!