March 21, 2026

ಬೀದಿ ನಾಯಿಗಳ ದಾಳಿಗೆ ಎರಡೂವರೆ ವರ್ಷದ ಮಗು ಬಲಿ

0
Screenshot_2022-04-28-04-55-57-06_680d03679600f7af0b4c700c6b270fe7.jpg

ಹೈದರಾಬಾದ್: ಬೀದಿ ನಾಯಿಗಳ ದಾಳಿಗೆ ಎರಡೂವರೆ ವರ್ಷದ ಮಗುವೊಂದು ಬಲಿಯಾದ ಘಟನೆ ಹೈದರಾಬಾದ್‌ನ ಗೊಲ್ಕೊಂಡಾದ ಬಾದಾ ಬಜಾರ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಅನಸ್ ಅಹ್ಮದ್ ಮೃತಪಟ್ಟ ಮಗು. ಮನೆಯ ಸಮೀಪದಲ್ಲಿ ಮಗು ಆಟದಲ್ಲಿ ನಿರತನಾಗಿದ್ದಾಗ ಬೀದಿ ನಾಯಿಗಳ ಗುಂಪು ದಾಳಿ ನಡೆಸಿದೆ. ಅಲ್ಲದೆ, ಮಗುವನ್ನು ಪಕ್ಕದ ಸೇನಾ ಪ್ರದೇಶದವರೆಗೂ ಎಳೆದೊಯ್ದು ಕಚ್ಚಿ ಗಂಭೀರ ಗಾಯಗೊಳಿಸಿವೆ.

ಮಗುವಿನ ಚೀರಾಟ ಕೇಳಿ ಪೋಷಕರು, ಅಕ್ಕಪಕ್ಕದ ಮನೆಯವರು ಓಡಿ ಮಗುವನ್ನು ನಾಯಿಗಳಿಂದ ಬಿಡಿಸಿ ತತ್‌ಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆದರೆ ಮುಖ, ಗಂಟಲು ಮತ್ತಿತರ ಭಾಗಗಳಿಗೆ ಕಚ್ಚಿದ್ದರಿಂದ ಗಂಭೀರ ಗಾಯಗೊಂಡು ಮಗು ಆ ವೇಳೆಗಾಗಲೇ ಸಾವನ್ನಪ್ಪಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!