ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್: ಭಾರತಕ್ಕೆ 3 ಕಂಚಿನ ಪದಕ
ಮಂಗೋಲಿಯಾ: ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಮೊದಲ ದಿನ ಭಾರತ 3 ಕಂಚಿನ ಪದಕಗಳನ್ನು ಜಯಿಸಿದೆ. ಗ್ರೀಕೋ ರೋಮನ್ ವಿಭಾಗದಲ್ಲಿ ಕಣಕ್ಕಿಳಿದ ಐವರು ಸ್ಪರ್ಧಿಗಳಲ್ಲಿ ಮೂವರು ಪದಕಕ್ಕೆ ಕೊರಳೊಡ್ಡಿದರು.
ಮಂಗಳವಾರದ ಸ್ಪರ್ಧೆಯಲ್ಲಿ ಕಂಚಿನ ಪದಕದ ಸಾಧನೆಗೈದವರೆಂದರೆ ಸುನೀಲ್ ಕುಮಾರ್, ಅರ್ಜುನ್ ಹಾಲಕುರ್ಕಿ ಮತ್ತು ನೀರಜ್. ಇವರಲ್ಲಿ ಸುನೀಲ್ ಕುಮಾರ್ 87 ಕೆಜಿ ವಿಭಾಗದಲ್ಲಿ ಪದಕ ಗೆದ್ದರು.




