February 1, 2026

ಕಾಬೂಲ್: ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಸರಣಿ ಬಾಂಬ್ ದಾಳಿ: 7 ವಿದ್ಯಾರ್ಥಿಗಳು ಮೃತ್ಯು, ಹಲವರಿಗೆ ಗಾಯ

0
image_editor_output_image-1374529953-1650362468087.jpg

ಕಾಬೂಲ್: ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ಸರಣಿ ಬಾಂಬ್ ದಾಳಿ ನಡೆಸಿದ ಪರಿಣಾಮ ಸುಮಾರು 7 ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆ ಮಂಗಳವಾರ ಅಫ್ಘಾನಿಸ್ತಾನದಲ್ಲಿ ನಡೆದಿರುವುದಾಗಿ ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಸುನ್ನಿ ಉಗ್ರರು ಹೈಸ್ಕೂಲ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಈ ಪ್ರದೇಶದಲ್ಲಿ ಒಟ್ಟು ಮೂರು ಬಾಂಬ್ ಸ್ಫೋಟಗೊಂಡಿದ್ದು, ಸಾವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದ್ದಿರುವುದಾಗಿ ಕಾಬೂಲ್ ಕಮಾಂಡರ್ ವಕ್ತಾರ ಖಾಲೀದ್ ಝರ್ದಾನ್ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಈ ಪ್ರದೇಶದ ಸುತ್ತಮುತ್ತ ಶಿಯಾ ಹಝಾರಾ ಸಮುದಾಯದವರು ವಾಸಿಸುತ್ತಿದ್ದು, ಸಂಪ್ರದಾಯವಾದಿ ಮತ್ತು ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿರಿಸಿಕೊಂಡು ಸುನ್ನಿ ಉಗ್ರರ ಸಂಘಟನೆ ದಾಳಿ ನಡೆಸುತ್ತಿರುವುದಾಗಿ ವರದಿ ವಿವರಿಸಿದೆ.

Leave a Reply

Your email address will not be published. Required fields are marked *

error: Content is protected !!