February 4, 2026

ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ನ ಈಜು ತರಬೇತುದಾರ ಆತ್ಮಹತ್ಯೆ

0
Screenshot_2022-04-16-14-54-26-00_680d03679600f7af0b4c700c6b270fe7.jpg

ಬ್ರಹ್ಮಾವರ: ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ನ ಈಜು ತರಬೇತುದಾರ ಮಂಜುನಾಥ್ ಮಜಳ್ಕರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ರಹ್ಮಾವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ.

ಕಾರವಾರದ ನಿವಾಸಿಯಾಗಿರುವ ಮಂಜುನಾಥ ಮಜಳ್ಕರ್‌ ಕಳೆದ 4 ತಿಂಗಳಿನಿಂದ ಬ್ರಹ್ಮಾವರ ಸ್ಪೋಟ್ಸ್‌ ಕ್ಲಬ್‌ ನಲ್ಲಿ ಈಜುಗಾರ ತರಬೇತಿಗಾರನಾಗಿ ಕೆಲಸ ಮಾಡಿಕೊಂಡಿದ್ದರು.

ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಏ.15ರ ಶನಿವಾರ ಮಧ್ಯಾಹ್ನ ಸ್ಪೋಟ್ಸ್‌ ಕ್ಲಬ್‌ನ ಗ್ರೀನ್‌‌ರೂಮ್‌‌ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾರೆ ಎಂದು ಮಂಜುನಾಥ್ ರ ಅಣ್ಣ ವಿನಾಯಕ ಸುರೇಶ ಮಜಳ್ಕರ್ ಹೇಳಿಕೆಯಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!