August 20, 2026

ಕಾಸರಗೋಡು: ಸ್ಕೂಟರ್ ಮತ್ತು ಪಿಕಪ್ ನಡುವೆ ಅಪಘಾತ: ಯುವಕ ಮೃತ್ಯು

0
image_editor_output_image311316836-1650001666333.jpg

ಕಾಸರಗೋಡು: ಸ್ಕೂಟರ್ ಹಾಗೂ ಪಿಕಪ್ ವ್ಯಾನ್ ನಡುವೆ ಉಂಟಾದ ಅಪಘಾತದಲ್ಲಿ ಸವಾರ ನೋರ್ವ ಮೃತ ಪಟ್ಟ ಘಟನೆ ನಗರ ಹೊರವಲಯದ ಚೆಂಗಳ ನಾಲ್ಕನೇ ಮೈಲ್‌‌ನಲ್ಲಿ ನಡೆದಿದೆ.

ಮೃತಪಟ್ಟವರನ್ನು ಬೋವಿಕ್ಕಾನ ಕರಿವೇಡಗದ ಅಬೂಬಕ್ಕರ್ ಸಿದ್ದೀಕ್(24) ಎಂದು ಗುರುತಿಸಲಾಗಿದ್ದು, ಜೊತೆಗಿದ್ದ ಶಮೀಸ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಸಿಟಿಂಗ್ ವೀಸಾದಲ್ಲಿ ದುಬೈಗೆ ತೆರಳಿ ಒಂದು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿದ್ದನು ಎನ್ನಲಾಗಿದೆ.

ವಿದ್ಯಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!