August 20, 2026

ವಿಟ್ಲದಲ್ಲಿ ನೂತನ ಪುರುಷರ ಉಡುಪುಗಳ “ITCHA” ಶೋ ರೂಮ್ ಉದ್ಘಾಟನೆ

0
image_editor_output_image410343804-1649948269210.jpg

ವಿಟ್ಲ: ವಿಟ್ಲದ ವಿ.ಎಚ್ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪುರುಷರ ಉಡುಪುಗಳ ITCHA ಶೋ ರೂಮ್ ಉದ್ಘಾಟನೆಗೊಂಡಿತ್ತು.

ಪುರುಷರ ನವನವೀನ ಟೀ ಶರ್ಟ್, ಪ್ಯಾಂಟ್, ಶರ್ಟ್ ಗಳ ಮಾರಾಟ ಕ್ಷೇತ್ರದಲ್ಲಿ ಸಾಕಷ್ಟು ಅನುಭವ ಹೊಂದಿರುವ ITCHA ಸಂಸ್ಥೆ ಪುತ್ತೂರಿನಲ್ಲಿ ಶಾಖೆ ಹೊಂದಿದ್ದು, ಇದೀಗ ವಿಟ್ಲ ಭಾಗಕ್ಕೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸಿದೆ.

ನೂತನ ಶೋ ರೂಮ್ ಅನ್ನು ಸಯ್ಯಿದ್ ಹಾದಿ ತಂಙಳ್ ಅಲ್ ಮಸ್ಹೂರ್ ಮೊಗ್ರಲ್ ಕಾಸರಗೋಡು ಅವರು ಉದ್ಘಾಟಿಸಿದರು. ಮಹಮ್ಮದೂಲ್ ಫೈಝಿ ವಾಲೆಮುಂಡೋವ್ ಉಸ್ತಾದ್ ದುವಾಃ ನೆರವೇರಿಸಿದರು. ಉಬೈದ್ ವಿಟ್ಲ ಬಝಾರ್ ಅವರು ಪ್ರಥಮ ಖರೀದಿ ಮಾಡಿದರು.

ಈ ಸಂದರ್ಭ ಟೌನ್ ಮಸೀದಿ ಖತೀಬು ಅಬ್ಬಾಸ್ ಮದನಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ ಎಸ್ ಮಹಮ್ಮದ್, ವಿ.ಎಚ್ ಮಾಲಕ ವಿ.ಎಚ್ ಅಶ್ರಪ್ , ಶಾಕೀರ್ ಅಳಕೆಮಜಲು, ಕಲಂದರ್ ಪರ್ತಿಪ್ಪಾಡಿ, ವಿಟ್ಲ ವರ್ತಕರ ಸಂಘದ ಉಪಾಧ್ಯಕ್ಷ ವಿ.ಎಸ್ ಇಬ್ರಾಹಿಂ, ಸಂಸ್ಥೆಯ ಪಾಲುದಾರರಾದ ಸೈನಾಪ್ ಮತ್ತು ಸಮ್ಮಾಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!