ವಿಟ್ಲ ಜೇಸಿ ಶಾಲೆ: ನೂತನ ಶಿಶುಮಂದಿರಕ್ಕೆ ಶಿಲಾನ್ಯಾಸ
ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯು ತಮ್ಮ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ವಿಸ್ತರಣೆಗಾಗಿ ಪ್ರಿ-ಸ್ಕೂಲ್ ವಿಭಾಗವನ್ನು ತೆರೆಯಲು ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿತು.

ಈ ಯೋಜನೆಯು 2022-23ನೇ ಶೈಕ್ಷಣಿಕ ವರ್ಷದಿಂದ ಎರಡುವರೆ ವರ್ಷ ಮೇಲ್ಪಟ್ಟ ಪುಟಾಣಿಗಳಿಗೆ ವಿಶೇಷ ಕಾಳಜಿಯೊಂದಿಗೆ ಆಟ -ಪಾಠಗಳನ್ನೊಳಗೊಂಡು ಕಾರ್ಯಾಚರಿಸಲಿದೆ.
ರಾಧಾಕೃಷ್ಣ ಭಟ್ ಕೊಡಿಪ್ಪಾಡಿ ಇವರ ಪೌರೋಹಿತ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಜೇಸಿ ಸಂಸ್ಥೆಯ ಅಧ್ಯಕ್ಷರಾದ ಯಲ್. ಯನ್. ಕೂಡೂರ್ ರವರು ಭಾಗವಹಿಸಿ, ಶಿಕ್ಷಣ ಸಂಸ್ಥೆಯು ಹೊಸತನವನ್ನು ಒಗ್ಗೂಡಿಸಿಕೊಂಡು ಮುಂದುವರೆಯುವ ದೃಷ್ಟಿಕೋನವನ್ನು ಇರಿಸಿ ಹೊಸ ಶಿಕ್ಷಣ ನೀತಿಗೆ ಅಣಿಯಾಗಬೇಕಾಗಿರುವುದು ಅನಿವಾರ್ಯವಾಗಿದೆ. ಈ ಉದ್ದೇಶದಿಂದ ನಮ್ಮ ನೂತನ ಕಟ್ಟಡವು ಶೀಘ್ರವಾಗಿ ನಿರ್ಮಾಣಗೊಳ್ಳಲಿದೆ ಎಂದು ಶುಭ ಹಾರೈಸಿದರು.
ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಆಡಳಿತಾಧಿಕಾರಿ, ಪ್ರಾಂಶುಪಾಲರು, ಉಪಾಪ್ರಾಂಶುಪಾಲರುಗಳು, ಶಿಕ್ಷಕ -ಶಿಕ್ಷಕೇತರ ವೃಂದದವರು ಭಾಗವಹಿಸಿದ್ದರು. ಬಳಿಕ ಅಂಬೇಡ್ಕರ್ ಜಯಂತಿ ಆಚರಣೆ ಹಾಗೂ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಜರಗಿತು.
ಶ್ರೀಧರ ಶೆಟ್ಟಿ ಉಪಾಧ್ಯಕ್ಷರು, ಮೋಹನ ಎ ಕಾರ್ಯದರ್ಶಿ, ಶ್ರೀಪ್ರಕಾಶ್ ಜತೆಕಾರ್ಯದರ್ಶಿ, ಪ್ರಭಾಕರ ಶೆಟ್ಟಿ ಕೋಶಾಧಿಕಾರಿ, ಸದಸ್ಯರಾದ ಹಸನ್ ವಿಟ್ಲ, ಮೋನಪ್ಪ ಶೆಟ್ಟಿ, ಗೋಕುಲ್ ಶೇಟ್, ವಿಜಯ ಪಾಯಿಸ್ ಚಂದ್ರಹಾಸ್ ಕೊಪ್ಪಳ, ರಾಧಾಕೃಷ್ಣ ಎ ಆಡಳಿತಾಧಿಕಾರಿ, ಜಯರಾಮ್ ರೈ ಪ್ರಾಂಶುಪಾಲರು, ಉಪಾಪ್ರಾಂಶುಪಾಲರಾದ ಜ್ಯೋತಿ ಹಾಗೂ ಹೇಮಲತಾ ಉಪಸ್ಥಿತರಿದ್ದರು.




