March 22, 2026

ವಿಟ್ಲ: ಟ್ರ್ಯಾಕ್ಟರ್ ಮತ್ತು ಆಕ್ಟಿವಾ ನಡುವೆ ಅಪಘಾತ: ಸವಾರ ಗಂಭೀರ

0
IMG_20220308_164918.jpg

ವಿಟ್ಲ: ಹಿಂದಿನಿಂದ ಬಂದ ಟ್ರ್ಯಾಕ್ಟರ್ ಆಕ್ಟಿವಾಕ್ಕೆ ಡಿಕ್ಕಿ ಹೊಡೆದಿದ್ದು, ಆಕ್ಟಿವಾ ಮುಂದಿನ ಟಿಪ್ಪರ್ ಗೆ ಡಿಕ್ಕಿ ಹೊಡೆದು, ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ನಾಲ್ಕುಮಾರ್ಗದಲ್ಲಿ ನಡೆದಿದೆ.

ಅಳಿಕೆ ಮೂಡಾಯಿಬೆಟ್ಟು ನಿವಾಸಿಗಳಾದ ಪ್ರವೀಣ್ ಕುಮಾರ್, ಬಾಸ್ಕರ ಗಾಯಾಳುಗಳಾಗಿದ್ದಾರೆ.

ಸರಣಿ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

Leave a Reply

Your email address will not be published. Required fields are marked *

error: Content is protected !!