July 6, 2026

ಕಾಣೆಯಾಗಿದ್ದ ವ್ಯಕ್ತಿ ಸುಳ್ಯದಲ್ಲಿ ಶವವಾಗಿ ಪತ್ತೆ

0
images-78.jpeg

ಸುಳ್ಯ: ತಾಲೂಕಿನ ಅಜ್ಜಾವರ ಗ್ರಾಮದ ಕಾಟಿಪಳ್ಳ ನಿವಾಸಿ ಮಾಯಿಲಪ್ಪ ಎಂಬುವವರು ನಿನ್ನೆ 7 ಗಂಟೆಯಿಂದ ಕಾಣೆಯಾಗಿರುವುದಾಗಿ ಹೇಳಲಾಗುತ್ತಿತ್ತು.
ಅವರ ಪತ್ತೆಗಾಗಿ ಕೆಲವು ವ್ಯಾಟ್ಸಪ್ ಗುಂಪುಗಳಲ್ಲಿ ಅವರ ಭಾವಚಿತ್ರ ಮತ್ತು ದೂರವಾಣಿ ಸಂಪರ್ಕ ನಂಬರ್ ಗಳನ್ನು ನೀಡಿ ಹರಿಯ ಬಿಟ್ಟು ಹುಡುಕಳು ಸಹಕರಿಸಲು ಮನವಿ ಮಾಡಿಕೊಂಡಿದ್ದರು.

ಆದರೆ ಇಂದು ಮುಂಜಾನೆ ಸುಳ್ಯದ ರಥ ಬೀದಿಯ ಪಕ್ಕದಲ್ಲೆ ಇರುವ ಹಳೆಯ ಪ್ರಕಾಶ್ ಚಿತ್ರಮಂದಿರದ ಆವರಣದ ಬಿದ್ದಿರುವ ಕಟ್ಟಡದ ಪಕ್ಕದಲ್ಲಿ ಮಾಯಿಲಪ್ಪರವರ ಮೃತದೇಹ ಪತ್ತೆಯಾಗಿದ್ದು, ಸುಳ್ಯ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಸುಳ್ಯದ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!