February 3, 2026

ಮನೆಗೆ ಬೆಂಕಿ: ಒಂದೇ ಕುಟುಂಬದ ಐದು ಜನರು ಮೃತ್ಯು

0
Screenshot_2022-03-08-10-44-07-75_680d03679600f7af0b4c700c6b270fe7.jpg

ಕೊಚ್ಚಿನ್: ಕೇರಳದ ವರ್ಕಲಾದ ದಳವಪುರಂನಲ್ಲಿ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಐದು ಜನರು ಮೃತಪಟ್ಟಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

ಮೃತರನ್ನು ವರ್ಕಲಾದಲ್ಲಿ ಪ್ರತಾಪನ್ ಅವರು ತರಕಾರಿ ಮಾರಾಟಗಾರರಾಗಿದ್ದ ಪ್ರತಾಪನ್ (62), ಶೆರ್ಲಿ (53), ಅಭಿರಾಮಿ (25), ಅಖಿಲ್ (29) ಮತ್ತು ಅಭಿರಾಮಿ ಅವರ ಎಂಟು ತಿಂಗಳ ಮಗ ರಿಯಾನ್ ಎಂದು ಗುರುತಿಸಲಾಗಿದೆ.

ಈ ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಪ್ರತಾಪನ್ ಅವರ ಹಿರಿಯ ಮಗ ನಿಹುಲ್ ಅವರನ್ನು ಅಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಬೆಂಕಿ ಕಾಣಿಸಿಕೊಂಡ ತಕ್ಷಣ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಐದು ಬೈಕ್ ಗಳು ಸುಟ್ಟುಹೋಗಿದ್ದು, ಮನೆಯಲ್ಲಿದ್ದ ಹವಾನಿಯಂತ್ರಣಗಳು (ಎಸಿ) ಸಹ ನಾಶವಾಗಿವೆ.

ಘಟನೆಯ ಕಾರಣದ ಬಗ್ಗೆ ಸದ್ಯಕ್ಕೆ ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!