February 1, 2026

ರಷ್ಯಾ ಪಡೆಗಳಿಂದ ಉಕ್ರೇನ್ ಮೇಲೆ ಶೆಲ್‌ ದಾಳಿ: 8 ಮಂದಿ ಮೃತಪಟ್ಟಿದ್ದು, 9 ಜನರು ಗಾಯ

0
image_editor_output_image-285334427-1645690749244.jpg

ಉಕ್ರೇನ್: ರಷ್ಯಾ ಪಡೆಗಳು ನಡೆಸಿದ ಶೆಲ್‌ ದಾಳಿಯಿಂದಾಗಿ ಕನಿಷ್ಠ 8 ಮಂದಿ ಮೃತಪಟ್ಟಿದ್ದು, 9 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್ ಮೇಲೆ ಸೇನಾ ಕಾರ್ಯಾಚರಣೆಯನ್ನು ಗುರುವಾರ ಘೋಷಿಸಿದ್ದಾರೆ. ಅದರಂತೆ ರಷ್ಯಾ ಸೇನೆಯ ಭೂ ಮತ್ತು ವಾಯುಪಡೆಗಳು, ಉಕ್ರೇನ್‌ ಮೇಲೆ ಆಕ್ರಮಣ ಆರಂಭಿಸಿವೆ.

ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಉಕ್ರೇನ್ ಗಡಿ ದಾಟಿ, ಚೆರ್ನಿಹಿವ್, ಖರ್ಕೈವ್ ಮತ್ತು ಲುಹಾನ್ಸ್ಕ್‌ ಪ್ರಾಂತ್ಯಕ್ಕೆ ಪ್ರವೇಶಿಸಿವೆ ಎಂದು ಗಡಿ ಭದ್ರತಾ ಪಡೆ ಸಿಬ್ಬಂದಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!