“ನೀನು ಸುಂದರವಾಗಿಲ್ಲ ಎಂದ ಪತಿ: ಮೈಮೇಲೆ ಬೆಂಕಿ ಹಚ್ಚಿಕೊಂಡು ಪತ್ನಿ ಆತ್ಮಹತ್ಯೆ
ಬೆಂಗಳೂರು: ನೀನು ಕುರೂಪಿ, ಸುಂದರವಾಗಿಲ್ಲ ಎಂದು ಗಂಡನಿಂದ ಪದೇ ಪದೇ ನಿಂದನೆ ಕೇಳಿದ್ದ ಮಹಿಳೆಯೊಬ್ಬರು ಮೈಮೇಲೆ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿಜೆ ಹಳ್ಳಿಯ ಈದ್ಗಾ ಮೊಹಲ್ಲಾದಲ್ಲಿ ನಡೆದಿದೆ.
33 ವರ್ಷದ ಅನಿಶಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಫೆ. 18 ರಂದು ಈ ಘಟನೆ ನಡೆದಿದೆ. ಮೂರು ವರ್ಷದ ಹಿಂದೆ ನಿಜಾಮುದ್ದೀನ್ ಜೊತೆಗೆ ಮದುವೆಯಾಗಿದ್ದ ಮಹಿಳಿಗೆ ದಂಪತಿಗೆ ಎರಡು ವರ್ಷ ಹಾಗೂ 6 ತಿಂಗಳ ಇಬ್ಬರು ಮಕ್ಕಳಿದ್ದಾರೆ
ನೀನು ಕುರೂಪಿ, ಸುಂದರವಾಗಿಲ್ಲ ಎಂದು ಗಂಡ ನಿಂದನೆ ಮಾಡುತ್ತಾರೆ ಎಂದು ಮಹಿಳೆ ತನ್ನ ಕುಟುಂಬಸ್ಥರಲ್ಲಿ ಹೇಳಿಕೊಂಡಿದ್ದಳು. ಸದ್ಯ ಈ ವಿಷಯದಿಂದಲೇ ನೊಂದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ




