ಉತ್ತರ ಪ್ರದೇಶ ಚುನಾವಣೆ: ಮೊದಲ ಹಂತದ ಮತದಾನ ಆರಂಭ
ನೊಯ್ಡಾ: ಉತ್ತರ ಪ್ರದೇಶ ರಾಜ್ಯದಲ್ಲಿ ಗುರುವಾರ ಬೆಳಿಗ್ಗೆ 6.30ರಿಂದಲೇ ಮೊದಲ ಹಂತದ ಮತದಾನ ಶುರುವಾಗಿದ್ದು, ಬೆಳಗ್ಗೆ 9.30 ಗಂಟೆಯ ಹೊತ್ತಿಗೆ ಶೇ.7.95ರಷ್ಟು ಮತದಾನವಾಗಿದೆ.
ಬೆಳಗ್ಗೆಯಿಂದ ಅತೀವ್ರ ಚಳಿಯಿದ್ದರೂ ಕೂಡ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡುತ್ತಿರುವುದು ಕಂಡು ಬಂದಿದೆ.
ಚುನಾವಣಾ ಆಯೋಗದ ಪ್ರಕಾರ, ಮಥುರಾ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡಾ 8.23 ರಷ್ಟು ಮತದಾನವಾಗಿದ್ದರೆ, ಆಗ್ರಾದಲ್ಲಿ ಶೇಕಡಾ 7.64 ರಷ್ಟು ಮತ್ತು ಬಾಗ್ಪತ್ ಕ್ಷೇತ್ರದಿಂದ ಶೇಕಡಾ 8.93 ರಷ್ಟು ಮತದಾನವಾಗಿದೆ ಎಂದು ಮಾಹಿತಿ ನೀಡಿದೆ.
ಇನ್ನು ಅಲಿಗಢ್ ಕ್ಷೇತ್ರದಲ್ಲಿ ಶೇ 8.39 ರಷ್ಟು ಮತದಾನವಾಗಿದ್ದರೆ, ಗೌತಮ್ ಬುದ್ಧ ನಗರದಲ್ಲಿ ಶೇ 8.07 ರಷ್ಟು ಮತದಾನವಾಗಿದೆ ಎಂದು ತಿಳಿಸಿದೆ.




