February 3, 2026

ಸುಳ್ಯ: ಜುವೆಲ್ಲರ್ಸ್ ಶಾಪ್ ನಲ್ಲಿ ಚಿನ್ನ ಕೋಟಿಂಗ್ ವಿಷಯದಲ್ಲಿ ಪರಸ್ಪರ ಹಲ್ಲೆ – ಓರ್ವ ಆಸ್ಪತ್ರೆಗೆ ದಾಖಲು

0
IMG_20220122_113448.jpg

ಸುಳ್ಯ: ಬೆಳ್ಳಿಗೆ ಚಿನ್ನದ ಕೋಟಿಂಗ್ ಮಾಡಿಕೊಡಲು ಜುವೆಲ್ಲರ್ಸ್ ಶಾಪ್ ಗೆ ಕೋಟಿಂಗ್ ಮಾಡಲು ಹೋದ ವ್ಯಕ್ತಿ ಮತ್ತು ಜುವೆಲ್ಲರ್ಸ್ ಶಾಪ್ ನ ಮಾಲಕರ ನಡುವೆ ಪರಸ್ಪರ ಹಲ್ಲೆ ನಡೆದು ಓರ್ವ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯದಲ್ಲಿ ಜ.23ರಂದು ವರದಿಯಾಗಿದೆ.
ಜಾಲ್ಸೂರಿನ ವಿಮಲೇಶ್ ಜುವೆಲರ್ ಶಾಪ್ ಮಾಲಕ ಗೋಪಾಲ್ ಶೇಟ್ ಎಂಬುವವರು ಸುಳ್ಯದ ರಾಮ ಬಾರ್ ಸಮೀಪದ ಜುವೆಲ್ಲರ್ಸ್ ಅಂಗಡಿಗೆ ಹೋಗಿ ಅಂಗಡಿ ಮಾಲಕ ಉತ್ತಮ್ ಶೇಟ್ ಎಂಬವರಿಗೆ ಬೆಳ್ಳಿಗೆ ಚಿನ್ನದ ಕೋಟಿಂಗ್ ಮಾಡಲು ಕೊಟ್ಟಿದ್ದರೆನ್ನಲಾಗಿದೆ.

ತುರ್ತಾಗಿ ಕೋಟಿಂಗ್ ಕೆಲಸ ಮಾಡಿ ಕೊಡುವ ಮಾತಿಗೆ ಸಂಬಂಧಿಸಿ ಮಾತು ಬೆಳೆದು ಉತ್ತಮ ಶೇಟ್ ಅವರು ಗೋಪಾಲ ಶೇಟ್ ಅವರಿಗೆ ರಾಡ್ ನಿಂದ ಕೈಗೆ ಹೊಡೆದು ಹಲ್ಲೆ ನಡೆಸಿದ್ದರೆನ್ನಲಾಗಿದೆ. ಘಟನೆಯಿಂದ ಗೋಪಾಲ ಶೇಟ್ ಅವರ ಕೈ ಪ್ರಾಕ್ಚರ್ ಆಗಿದ್ದು, ಕೈ ಬೆರಳು ಹಾಗೂ ತುಟಿಗೆ ಗಾಯವಾಗಿದ್ದು, ಅವರು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗೋಪಾಲ ಶೇಟ್ ಅವರು ನನ್ನ ಅಂಗಡಿಗೆ ಕೋಟಿಂಗ್ ಕೆಲಸಕ್ಕಾಗಿ ಬಂದು ವಿಚಾರಿಸುತ್ತಿದ್ದ ವೇಳೆ ಬೇರೆ ಇಬ್ಬರು ಮಹಿಳೆಯರು ಚೈನ್ ಖರೀದಿಗಾಗಿ ಬಂದಿದ್ದರು. ಆ ಸಂದರ್ಭದಲ್ಲಿ ನಾನು ಗೋಪಾಲ ಶೇಟ್ ರವರಿಗೆ ಸ್ವಲ್ಪ ಪಕ್ಕದಲ್ಲಿ ಕುಳಿತುಕೊಳ್ಳಿ. ಮಹಿಳೆಯರಿಗೆ ಚೈನ್ ನೀಡಿದ ಬಳಿಕ ತಮ್ಮ ಕೆಲಸ ಮಾಡಿಕೊಡುವುದಾಗಿ ಹೇಳಿದ್ದೆ. ಈ ವೇಳೆ ನಮ್ಮಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆಯಿತು‌.

ಈ ಸಂದರ್ಭದಲ್ಲಿ ಏಕಾಏಕಿ ಗೋಪಾಲ ಶೇಟ್ ಅವರು ಅವಾಚ್ಯ ಶಬ್ದಗಳಿಂದ ಬೈದು ನನ್ನ ಕೆನ್ನೆಗೆ ಬಲವಾಗಿ ಹೊಡೆದರು. ಆ ವೇಳೆ ನಾನು ಕೆಳಗೆ ಬಿದ್ದೆ. ಅವರು ನನ್ನ ಮೇಲೆ ಮುಗಿ ಬೀಳುವ ಸಂದರ್ಭದಲ್ಲಿ ಪ್ರತಿರೋಧ ವ್ಯಕ್ತಪಡಿಸಿ, ಅವರಿಗೂ ನಾನು ಹೊಡಿದಿದ್ದೆ. ಬಳಿಕ ನಾನು ಸುಳ್ಯ ಪೊಲೀಸ್ ಠಾಣೆಗೆ ತೆರಳಿ ಗೋಪಾಲ ಶೇಟ್ ಅವರ ಮೇಲೆ ದೂರು ನೀಡಿದ್ದೇನೆ ಎಂದು ಉತ್ತಮ್ ಶೇಟ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!