July 6, 2026

ಬೊಲೆರೋ ಜೀಪ್-ಲಾರಿ ನಡುವೆ ಭೀಕರ ರಸ್ತೆ ಅಪಘಾತ: ವರನ ಕಡೆಯ ಐದು ಮಂದಿ ಮೃತ್ಯು, ಐವರು ಗಂಭೀರ

0
image_editor_output_image-180219766-1642847138089.jpg

ಸೋನಾಪುರ (ಒಡಿಶಾ) : ಬೊಲೆರೋ ಜೀಪ್ ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮದುವೆ ಸಮಾರಂಭ ಮುಗಿಸಿ ಹಿಂತಿರುಗುತ್ತಿದ್ದ ವರನ ಕಡೆಯ ಐದು ಮಂದಿ ಸಾವನ್ನಪ್ಪಿ ಮತ್ತೆ ಐವರು ಗಂಭೀರ ಗಾಯಗೊಂಡ ಘಟನೆ ಶನಿವಾರ ನಸುಕಿನ ವೇಳೆ ಸಂಭವಿಸಿದೆ.

ಸೋನಾಪುರ್ ಜಿಲ್ಲೆಯ ಉಲ್ಲುಂದ ಬ್ಲಾಕ್‌ನ ನಿಮ್ನಾ ಮತ್ತು ಪಂಚಮಹಾಲ್ ಗ್ರಾಮದ 10 ಜನರು ಕೌದಿಯಮುಂಡ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಹಿಂದಿರುಗುತ್ತಿದ್ದಾಗ ಪ್ರಯಾಣಿಸುತ್ತಿದ್ದ ಬೊಲೆರೋ ಜೀಪ್ ಮಹಾನದಿ ಸೇತುವೆಯ ಮೇಲೆ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಸೋನೆಪುರ ಎಸ್ಪಿ ಸೀತಾರಾಮ್ ಸತ್ಪತಿ ತಿಳಿಸಿದ್ದಾರೆ.

ಘಟನೆಯಲ್ಲಿ ಪ್ರಮೋದ್ ಪಾಂಡಿಯಾ, ತ್ರಯಂಬಕ್ ಮೆಹರ್ ಮತ್ತು ಸುಭಮ್ ಪಾಂಡಿಯಾ ಅವರೊಂದಿಗೆ ಆಶಿಶ್ ಪಾಂಡಿಯಾ ಮತ್ತು ಅವರ ಪುತ್ರಿ ಸಿದ್ಧಿ ಪಾಂಡಿಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!