February 1, 2026

ದೆಹಲಿ: ನೂತನ ಸಂಸತ್ ಭವನ ಕಟ್ಟಡ ನಿರ್ಮಾಣ ವೆಚ್ಚದಲ್ಲಿ 200 ಕೋಟಿ ಹೆಚ್ಚಳ

0
n3520291321642757579195a33b5e7962274f4dfff151805bd8f6c683649d4850be3dd8e7f968f6a72c161b.jpg

ನವದೆಹಲಿ: ಉಕ್ಕು, ಎಲೆಕ್ಟ್ರಾನಿಕ್ಸ್ ವಸ್ತು ಮತ್ತು ಸಿಮೆಂಟ್ ಸಹಿತ ಕಚ್ಚಾ ಸರಕು ಬೆಲೆ ಹೆಚ್ಚಳದಿಂದಾಗಿ ನೂತನ ಸಂಸತ್ ಭವನ ಕಟ್ಟಡ ನಿರ್ಮಾಣದ ವೆಚ್ಚದಲ್ಲಿ ₹200 ಕೋಟಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಕೇಂದ್ರ ಲೋಕೋಪಯೋಗಿ ಇಲಾಖೆ ಈ ಕುರಿತಂತೆ ಲೋಕಸಭೆಯ ಕಾರ್ಯಾಲಯದಿಂದ ಅನುಮತಿ ಪಡೆದುಕೊಳ್ಳಲು ಮುಂದಾಗಿದೆ

ಈ ಮೊದಲು ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದುಕೊಳ್ಳುವ ಸಂದರ್ಭದಲ್ಲಿ ಇದ್ದ ವೆಚ್ಚಕ್ಕೆ ಹೋಲಿಸಿದರೆ ಈಗ ಹೆಚ್ಚಳವಾಗಿದೆ. ಹೀಗಾಗಿ ಹೊಸ ದರಕ್ಕೆ ಸಮಿತಿ ಅನುಮೋದನೆ ಪಡೆದುಕೊಳ್ಳಬೇಕಿದೆ.

2020ರಲ್ಲಿ ಟಾಟಾ ಪ್ರಾಜೆಕ್ಟ್ಸ್‌ಗೆ ನೂತನ ಸಂಸತ್ ಭವನ ನಿರ್ಮಾಣದ ಹೊಣೆಯನ್ನು ವಹಿಸಲಾಗಿತ್ತು. ಅಲ್ಲದೆ, ಆ ಸಂದರ್ಭದಲ್ಲಿ ₹971 ಕೋಟಿ ವೆಚ್ಚಕ್ಕೆ ಅನುಮೋದನೆ ದೊರೆತಿತ್ತು. ಆದರೆ ಕಚ್ಚಾ ಸಾಮಾಗ್ರಿ ದರ ಹೆಚ್ಚಳದಿಂದಾಗಿ, ಪ್ರಸ್ತುತ ಯೋಜನಾ ವೆಚ್ಚ ಅಂದಾಜು ₹1,200 ಕೋಟಿಗೆ ಏರಿಕೆಯಾಗಲಿದೆ.

ಸರ್ಕಾರ, ನೂತನ ಕಟ್ಟಡ ನಿರ್ಮಾಣಕ್ಕೆ 2022ರ ಅಕ್ಟೋಬರ್ ಗಡುವನ್ನು ವಿಧಿಸಿದ್ದು, ಸಂಸತ್‌ನ ಚಳಿಗಾಲದ ಅಧಿವೇಶನವನ್ನು ಹೊಸ ಸಂಸತ್ ಭವನದಲ್ಲೇ ನಡೆಸುವ ಉದ್ದೇಶ ಹೊಂದಿದೆ.

Leave a Reply

Your email address will not be published. Required fields are marked *

error: Content is protected !!