July 6, 2026

ಸುಳ್ಯ: ಸ್ವಿಫ್ಟ್ ಕಾರು ಮತ್ತು ಟೊಯಿಂಗ್ ವಾಹನ ಮಧ್ಯೆ ಅಪಘಾತ:
ಮೂವರು ಪ್ರಯಾಣಿಕರಿಗೆ ಗಾಯ

0
IMG-20220120-WA0001.jpg

ಸುಳ್ಯ: ತಾಲೂಕಿನ ಕನಕಮಜಲು ಬಳಿ ಟೊಯಿಂಗ್ ವಾಹನ ಟಾಟಾ ಕ್ಸೆನನ್ ಹಾಗೂ ಸ್ವಿಪ್ಟ್ ಕಾರಿನ ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದ ಘಟನೆ ಜನವರಿ 20 ರಂದು ಬೆಳಿಗ್ಗೆ ವರದಿಯಾಗಿದೆ.

ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಯಾಣಿಕರು ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಮಂಗಳೂರಿನಿಂದ ಮೈಸೂರಿಗೆ ಅಪಘಾತವಾದ ಕಾರೊಂದನ್ನು ಕೊಂಡೊಯ್ಯುತ್ತಿದ್ದ ಟೊಯಿಂಗ್ ಟಾಟಾ ಕ್ಸೆನಾನ್ ವಾಹನವು ಕೋಡಿ ತಿರುವಿಗೆ ತಲುಪುತ್ತಿದ್ದಂತೆ ವಾಹನದ ಬ್ರೇಕ್ ವೈಪಲ್ಯಗೊಂಡು ಮುಂಭಾಗದಿಂದ ಬರುತ್ತಿದ್ದ ಪೈಚಾರಿನ ಬದ್ರುದ್ಧೀನ್ ಎಂಬವರು ಚಲಾಯಿಸುತ್ತಿದ್ದ ಸ್ವಿಫ್ಟ್ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಪೈಚಾರು ಮಸೀದಿಯ ಗುರುಗಳಾದ ಮುನೀರ್ ಹಾಗೂ ಪೈಚಾರ್ ನ ಅಶ್ರಫ್ ಎಂಬವರಿಗೆ ಗಾಯಗಳಾಗಿ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

You may have missed

error: Content is protected !!