February 2, 2026

ನಿಗೂಢವಾಗಿ ನಾಪತ್ತೆಯಾಗಿದ್ದ 17 ವರ್ಷದ ಬಾಲಕಿ ಗುಜರಾತ್‌ನ ಸೂರತ್‌ನಲ್ಲಿ ಪತ್ತೆ

0
image_editor_output_image-70320543-1642505430219.jpg

ಬೆಂಗಳೂರು: 78 ದಿನಗಳ ಹಿಂದೆ ಬೆಂಗಳೂರಿನಿಂದ ನಿಗೂಡವಾಗಿ ನಾಪತ್ತೆಯಾಗಿದ್ದ 17 ವರ್ಷದ ಬಾಲಕಿ ಇದೀಗ ಗುಜರಾತ್‌ನ ಸೂರತ್‌ನಲ್ಲಿ ಪತ್ತೆಯಾಗಿದ್ದಾಳೆ ಎಂದು ತಿಳಿದು ಬಂದಿದೆ.

ಬಾಲಕಿಯು ಮಾಟ ಮಂತ್ರದ ಆಕರ್ಷತಳಾಗಿ ಆತ್ಮಗಳ ಜೊತೆ ಮಾತಡಬೇಕು ಎಂಬ ಇಂಗಿತವನ್ನು ಪೋಷಕರಲ್ಲಿ ವ್ಯಕ್ತಪಡಿಸಿದ್ದಳು ಆದರೆ ಪೋಷಕರು ಮನೆಯಲ್ಲಿಯೇ ಕಲಿಯುವಂತೆ ಹೇಳಿದ್ದು, ಬಾಲಕಿಯನ್ನು ಕೌನ್ಸಿಲಿಂಗ್ ಸಹ ಮಾಡಿಸಿದ್ದರು.

ಆದರೆ ಕಳೆದ ಅಕ್ಟೋಬರ್ 31 ರಂದು ಅನುಷ್ಕಾ ಬೆಂಗಳೂರಿನಿಂದ ನಾಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಪುತ್ರಿಗಾಗಿ ಅಭಿಷೇಕ್ ಮತ್ತು ಅರ್ಚನಾ ದಂಪತಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲು ಮಾಡಲಾಗಿತ್ತು.

ಇನ್ನು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಅನುಷ್ಕಾ ಮನೆಯಿಂದ ಎರಡು ಜೊತೆ ಬಟ್ಟೆ ಮತ್ತು 2,500 ರೂ.ಗಳ ಜೊತೆ ಹೊರಟವಳು ನಾಪತ್ತೆಯಾಗಿದ್ದಳು. ಎರಡು ತಿಂಗಳು ಕಳೆದರೂ ಆಕೆ ಪತ್ತೆಯಾಗಿರಲಿಲ್ಲ.

ಇದೀಗ ಬಾಲಕಿ ಗುಜರಾತ್ ರಾಜ್ಯದ ಸೂರತ್‌ನ ವಾತ್ಸಲ್ಯ ಅನಾಥಶ್ರಮದಲ್ಲಿ ಪತ್ತೆಯಾಗಿದ್ದಾಳೆಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!