February 4, 2026

ಕಾಬೂಲ್: 5.6 ತೀವ್ರತೆಯ ಭೂಕಂಪನ:
ಕನಿಷ್ಠ 12 ಮಂದಿ ಮೃತ್ಯು, ಹಲವಾರು ಮಂದಿ ಗಾಯ

0
image_editor_output_image-1412764955-1642484014035.jpg

ಕಾಬೂಲ್: ಅಫ್ಗಾನಿಸ್ತಾನದ ಬಡ್‌ಘಿಸ್‌ ಪ್ರಾಂತ್ಯದಲ್ಲಿ ಸೋಮವಾರ ಸಂಭವಿಸಿದ 5.6 ತೀವ್ರತೆಯ ಭೂಕಂಪನದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಾಂತ್ಯದ ರಾಜಧಾನಿ ಖ್ವಾಲಾ–ಇ–ನವ್’ನಿಂದ ಪೂರ್ವಕ್ಕೆ ಖ್ವಾಡಿಸ್‌ ಜಿಲ್ಲೆಯ ಬದ್ರುಕ್, ದರ್ಬಾಂದ್–ಇ–ಸಫೇದ್ ಮತ್ತು ಖಾಕ್ ಪೊಲಾಕ್ ಪ್ರದೇಶಗಳಲ್ಲಿ ಭೂಮಿ ಕಂಪಿಸಿತ್ತು’ ಎಂದು ಜಿಲ್ಲಾಡಳಿತದ ಹೇಳಿಕೆ ಉಲ್ಲೇಖಿಸಿ ‘ಕ್ಸಿನುವಾ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಸಂಜೆ 4:10ರ ಸುಮಾರಿಗೆ ಸಂಭವಿಸಿದ ಭೂಕಂಪನದಲ್ಲಿ ಅನೇಕ ಮನೆಗಳಿಗೆ ಹಾನಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

‘ಖ್ವಾಲಾ–ಇ–ನವ್’ನಿಂದ 40 ಕಿ.ಮೀ. ಪೂರ್ವಕ್ಕೆ, ತುರ್ಕ್‌ಮೆನಿಸ್ತಾನ್ ಜತೆ ಗಡಿ ಹಂಚಿಕೊಂಡಿರುವ ಬಡ್‌ಘಿಸ್‌ನಲ್ಲಿ 5.6 ತೀವ್ರತೆಯ ಭೂಕಂಪನ ಸಂಭವಿಸಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಹಲವು ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದೂ ಮೂಲಗಳು ಹೇಳಿವೆ.

Leave a Reply

Your email address will not be published. Required fields are marked *

error: Content is protected !!