February 4, 2026

ಝೋಮಾಟೋ ಮೂಲಕ ರೆಸ್ಟೋರೆಂಟ್‌ನಿಂದ ಫುಡ್ ಆರ್ಡರ್:
ಊಟದಲ್ಲಿ ಹಲ್ಲಿ ಪತ್ತೆ

0
image_editor_output_image1623549309-1642396918052.jpg

ಗ್ರೇಟರ್ ನೋಯ್ಡಾ: ವ್ಯಕ್ತಿಯೋರ್ವ ಝೋಮಾಟೋ ಮೂಲಕ ರೆಸ್ಟೋರೆಂಟ್‌ವೊಂದರಿಂದ ಆರ್ಡರ್ ಮಾಡಿದ ಆಹಾರದಲ್ಲಿ ಹಲ್ಲಿಯೊಂದು ಪತ್ತೆಯಾಗಿದೆ.

ಊಟದಲ್ಲಿ ಹಲ್ಲಿ ಪತ್ತೆಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಕಂಡೊಡನೆ ಗ್ರಾಹಕ ಕೌಸ್ತವ್ ಕುಮಾರ್ ಸಿನ್ಹಾ ಟ್ವಿಟರ್ ಮೂಲಕ ಕಂಪನಿಗೆ ದೂರು ನೀಡಿದ್ದಾರೆ.

ಜನವರಿ 14ರಂದು ಕೌಸ್ತವ್ ಕುಮಾರ್ ಸಿನ್ಹಾ ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ವೀಡಿಯೊವನ್ನು ಹಂಚಿಕೊಂಡಿದ್ದು, ನೋಯ್ಡಾದ ಗ್ರೆನೋ ವೆಸ್ಟ್‌ನಲ್ಲಿರುವ ಪಂಜಾಬಿ ರಸೋಯ್ ರೆಸ್ಟೊರೆಂಟ್‌ನಿಂದ ಆಹಾರವನ್ನು ಆರ್ಡರ್ ಮಾಡಿರುವುದಾಗಿ ವೀಡಿಯೊದಲ್ಲಿ ವ್ಯಕ್ತಿ ಹೇಳಿದ್ದಾನೆ. ಆಹಾರವನ್ನು ತೆರೆದ ತಕ್ಷಣ ಅದರೊಳಗಿನಿಂದ ಹಲ್ಲಿ ಹೊರಬಂದಿತು. ಸತ್ತ ಹಲ್ಲಿಯನ್ನು ನೋಡಿದ ಕೌಸ್ತವ್ ಟ್ವಿಟರ್ ಮೂಲಕ ದೂರು ದಾಖಲಿಸಿದ್ದಾರೆ.

ತನ್ನ ಟ್ವೀಟ್‌ನಲ್ಲಿ ಕೌಸ್ತವ್ ಕುಮಾರ್ ಸಿನ್ಹಾ, ‘ತಿನ್ನುವ ಆಹಾರದಲ್ಲಿ ಸತ್ತ ಹಲ್ಲಿಯನ್ನು ನೋಡಿ ಆಘಾತವಾಗಿದೆ. ಕೋವಿಡ್‌ನ ಮಧ್ಯೆ ಇದೆಲ್ಲ ಉದ್ದೇಶಪೂರ್ವಕವಾಗಿ ನಡೆಯುತ್ತಿದೆಯೇ ಎಂದನಿಸುತ್ತಿದ್ದು, ಇದೊಂದು ತುಂಬಾ ಕೆಟ್ಟ ಅನುಭವ’ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!