July 6, 2026

ಗುಪ್ತಾಂಗದಲ್ಲಿ ಚಿನ್ನ ಸಾಗಾಟಕ್ಕೆ ಯತ್ನ:
ಮೂವರು ಮಹಿಳೆಯರನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು

0
n3498426801642051108296249794c1e4d23900b39be2a01eef212157caf005d4030eca2ae816183cced6c7.jpg

ಹೈದರಾಬಾದ್: ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಮೂವರು ಮಹಿಳೆಯರನ್ನು ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮೂವರಿಂದ 72.8 ಲಕ್ಷ ಮೌಲ್ಯದ 1.48 ಕೆಜಿ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಸ್ಟಮ್ಸ್ ಅಧಿಕಾರಿಗಳ ಪ್ರಕಾರ, ಎಲ್ಲಾ ಮೂವರು ಮಹಿಳಾ ಪ್ರಯಾಣಿಕರು ದುಬೈನಿಂದ ಬೇರೆ ಬೇರೆ ವಿಮಾನಗಳಲ್ಲಿ ಇಲ್ಲಿಗೆ ಬಂದಿದ್ದರು.

ಅವರಲ್ಲಿ ಇಬ್ಬರು ತಮ್ಮ ಒಳ ಉಡುಪುಗಳಲ್ಲಿ ಬಚ್ಚಿಟ್ಟು ಪೇಸ್ಟ್ ರೂಪದಲ್ಲಿ ಚಿನ್ನವನ್ನು ಸಾಗಿಸುತ್ತಿರುವುದು ಕಂಡು ಬಂದರೆ, ಮೂರನೆಯವಳು ಗುಪ್ತಾಂಗದಲ್ಲಿ ಬಚ್ಚಿಟ್ಟಿದ್ದಳು.

ಮೊದಲ ಮಹಿಳೆ ತನ್ನ ಒಳ ಉಡುಪಿನಲ್ಲಿ 48.71 ಲಕ್ಷ ಮೌಲ್ಯದ 991 ಗ್ರಾಂ ಚಿನ್ನವನ್ನು ಬಚ್ಚಿಟ್ಟಿದ್ದಳು. ದುಬೈನಿಂದ ಕುವೈತ್ ಮೂಲಕ ಇಲ್ಲಿಗೆ ಆಗಮಿಸಿದ ಎರಡನೇ ಮಹಿಳೆ ಗುಪ್ತಾಂಗದಲ್ಲಿ ಬಚ್ಚಿಟ್ಟು ಚಿನ್ನದ ಪೇಸ್ಟ್ ಅನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ್ದಳು. ಆಕೆ 8.28 ಲಕ್ಷ ಮೌಲ್ಯದ 168.50 ಗ್ರಾಂ ಚಿನ್ನವನ್ನು ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿದ್ದಾಳೆ. ಇನ್ನು ಮೂರನೇ ಮಹಿಳೆ ತನ್ನ ಒಳ ಉಡುಪುಗಳಲ್ಲಿ 15.81 ಲಕ್ಷ ಮೌಲ್ಯದ 321.60 ಗ್ರಾಂ ಚಿನ್ನವನ್ನು ಬಚ್ಚಿಟ್ಟಿದ್ದಳು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!