July 6, 2026

ಅಪಘಾತದಲ್ಲಿ ಮೃತಪಟ್ಟ ಅಣ್ಣನ ಮೃತದೇಹ ನೋಡಿ ಆಘಾತದಿಂದ ತಂಗಿಯೂ ಕುಸಿದು ಬಿದ್ದು ಮೃತ್ಯು

0
image_editor_output_image345852338-1642048194408

ಮೈಸೂರು: ಅಣ್ಣನ ಮೃತದೇಹ ನೋಡಿ ಆಘಾತದಿಂದ ತಂಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಸೋಮನಹಳ್ಳಿ ಗೇಟ್ ಬಳಿ ಕಾರು ಮತ್ತು ಬೈಕ್ ನಡುವೆ ಸಂಭವಿಸದ್ದ ಅಪಘಾತದಲ್ಲಿ ಕೀರ್ತಿ ಎಂಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದ.

ಇಂದು ಆತನ ಅಂತ್ಯ ಸಂಸ್ಕಾರಕ್ಕೆ‌ ಬಂದಿದ್ದ ದೊಡ್ಡಪ್ಪನ ಮಗಳು ರಶ್ಮಿ (21) ಅಣ್ಣ ಕೀರ್ತಿ ಮೃತದೇಹ ನೋಡಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ತಕ್ಷಣ ರಶ್ಮಿಯನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರಶ್ಮಿ ಪ್ರಾಣಬಿಟ್ಟಿದ್ದಾಳೆ. ಹುಣಸೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You may have missed

error: Content is protected !!