ವಿಟ್ಲ: ಕಂಬಳಬೆಟ್ಟು ಸರಕಾರಿ ಶಾಲೆಗೆ ಆರು ಶೌಚಾಲಯ ನಿರ್ಮಾಣ: ಅಬ್ದುಲ್ ಬಶೀರ್ ಜನಪ್ರಿಯ ಅವರಿಂದ ಭರವಸೆ
ವಿಟ್ಲ: ಕಂಬಳಬೆಟ್ಟು ಸರಕಾರಿ ಶಾಲೆಗೆ ಇದೇ ಶಾಲೆಯ ಹಳೆ ವಿದ್ಯಾರ್ಥಿ ಅಬ್ದುಲ್ ಬಶೀರ್ ಜನಪ್ರಿಯ ಅವರು
ಆರು ಶೌಚಾಲಯಗಳನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಕಂಬಳಬೆಟ್ಟು ಹಾಸನದ ಪ್ರತಿಷ್ಟಿತ ಆಸ್ಪತ್ರೆಯಲ್ಲೊಂದಾದ ಜನಪ್ರಿಯ ಆಸ್ಪತ್ರೆಯ ವೈದ್ಯರಾದಂತಹ ಅಬ್ದುಲ್ ಬಶೀರ್ ಜನಪ್ರಿಯ ಅವರು ಇದೇ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದರು.
ಕಂಬಳಬೆಟ್ಟು ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿದ್ದರು. ಪ್ರಸ್ತುತ ಅವರು ಹಾಸನದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಹಾಸನ ಜಿಲ್ಲಾ ಸ್ವಾತಂತ್ರೋತ್ಸವ ಪ್ರಶಸ್ತಿ, ಹಾಸನ ಜಿಲ್ಲಾ ಕನ್ನಡ ರಾಜ್ಯೋತ್ಸವ ಹಾಗೂ ವೈದ್ಯಶ್ರೇಷ್ಠ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಅವರು ಇಂದು ತಾನು ಕಲಿತ ಶಾಲೆಗೆ ಭೇಟಿ ನೀಡಿ, ಶಾಲೆಯ ಪರಿಸ್ಥಿತಿ ಗಮನಿಸಿ ವಿದ್ಯೆ ನೀಡಿದ ವಿದ್ಯಾಲಯಕ್ಕೆ ಆರು ಶೌಚಾಲಯಗಳನ್ನು ನಿರ್ಮಿಸಿ ಕೊಡುವ ಭರವಸೆಯನ್ನು ನೀಡಿದ್ದಾರೆ.
ಈ ಸಮಯದಲ್ಲಿ ಅವರ ಸಹೋದರರಾದ ವಿ.ಕೆ ಅಬ್ದುಲ್ ಖಾದರ್, ಶಾಲಾ ಮುಖ್ಯ ಶಿಕ್ಷಕಿ ವಾರಿಜ ಟೀಚರ್ ಹಾಗೂ ವಿಟ್ಲ ಮುಡ್ನೂರು ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ದಿಕ್ ಕಂಬಳಬೆಟ್ಟು ಉಪಸ್ಥಿತರಿದ್ದರು.








