February 1, 2026

ಕಾಪು: ಟಯರ್ ಸಿಡಿದು ಅಡಿಕೆ ಸಾಗಾಟದ ಟೆಂಪೊ ಪಲ್ಟಿ

0
Screenshot_2022-01-12-10-31-47-87_40deb401b9ffe8e1df2f1cc5ba480b12.jpg

ಕಾಪು: ಕಾಪು ರಾಷ್ಟ್ರೀಯ ಹೆದ್ದಾರಿ 66ರ ಫ್ಲೈ ಓವರ್‌‌ನಲ್ಲಿ, ಅಡಿಕೆ ಸಾಗಾಟದ ಟೆಂಪೋವೊಂದು ಟಯರ್‌‌ ಸಿಡಿದು ಉರುಳಿ ಬಿದ್ದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಅಪಘಾತದಲ್ಲಿ ಟೆಂಪೋ ಚಾಲಕ ಹಾಗೂ ನಿರ್ವಾಹಕರಿಗೆ ಯಾವುದೇ ರೀತಿಯಾದ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.

ಮಂಗಳೂರಿಗೆ ಸಿದ್ದಾಪುರದಿಂದ ಅಡಿಕೆ ಸಾಗಾಟ ಮಾಡುತ್ತಿದ್ದ ಟೆಂಪೋದ ಟಯರ್‌‌‌ ಮಾರ್ಗ ಮಧ್ಯೆ ಒಡೆದಿದ್ದು, ಈ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಫ್ಲೈಓವರ್‌‌ನಲ್ಲಿ ಉರುಳಿ ಬಿದ್ದಿದೆ.

ಇದರ ಪರಿಣಾಮ ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!