ವಿಟ್ಲದಲ್ಲಿ ಲೈಫ್ ಕೇರ್ ಮೆಡಿಕಲ್ಸ್ ಶುಭಾರಂಭ
ವಿಟ್ಲ: ವಿಟ್ಲ ನಾಲ್ಕು ಮಾರ್ಗ ಜಂಕ್ಷನ್‌ನಲ್ಲಿರುವ ಲೈಫ್ ಕೇರ್ ಮೆಡಿಕಲ್ಸ್‌ನ ಉದ್ಘಾಟನಾ ಸಮಾರಂಭವು ಅಕ್ಟೋಬರ್ 26, ಸೋಮವಾರ ಬೆಳಿಗ್ಗೆ 9:30ಕ್ಕೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕುಂಬೋಳ್ ಸಯ್ಯಿದ್ ಮುಕ್ತಾರ್ ತಂಙಳ್ ರವರು ದುಆ ನೆರವೇರಿಸಿ ಉದ್ಘಾಟನೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜನಪ್ರಿಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಆಂಡ್ ಹಾಸ್ಪಿಟಲ್ಸ್, ಮಂಗಳೂರು ಮತ್ತು ಹಾಸನ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಡಾ. ಶಾರುಖ್ ಅಬ್ದುಲ್ಲಾ ಅವರು ಮಾತನಾಡಿ ಸಂಸ್ಥೆಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಖಾದರ್ ಹಾಜಿ ಬದ್ರಿಯಾ, ಜನಪ್ರಿಯ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಆಂಡ್ ಹಾಸ್ಪಿಟಲ್ಸ್‌ನ ವೈಸ್ ಚೇರ್‌ಮನ್ ಫಾತಿಮಾ ನಸ್ರಿನ್ ಬಶೀರ್, ಜನಪ್ರಿಯ ಗ್ರೂಪ್ ನ ಡಾ. ಜಶ್ನಿ ಬಷೀರ್, ಎಂ. ಎಸ್. ಮೊಹಮ್ಮದ್, ರಶೀದ್ ವಿಟ್ಲ, ಅಬ್ದುಲ್ ರಹಿಮಾನ್ ಹಾಜಿ ಕೂಡಾಜೆ, ಶಾಕಿರ್ ಅಳಕೆಮಜಲು, ಕಟ್ಟಡದ ಮಾಲಕ ಇಸ್ಮಾಯಿಲ್ ಹಾಜಿ, ನೌಶೀನ್ ಬದ್ರಿಯಾ, ಇಕ್ಬಾಲ್ ಶೀತಲ್, ಅಝೀಝ್ ಸನ, ಇಸ್ಮಾಯಿಲ್ ಹಾಜಿ ವಿ.ಕೆ., ಉದ್ಯಮಿ ಅಶ್ರಫ್ ವಿ.ಎಚ್., ಅಬೂಬಕ್ಕರ್ ಅನಿಲಕಟ್ಟೆ, ಉಮ್ಮರ್ ಹಾಜಿ ಕಂಬಳಬೆಟ್ಟು, ಅಶ್ರಫ್ ಪರ್ತಿಪ್ಪಾಡಿ, ಇಸ್ಮಾಯಿಲ್ ಪೆಟ್ ಶಾಪ್, ಜನಪ್ರಿಯ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ಲಿಬಿನ್ ಕ್ಸೇವಿಯರ್, ಸಾಮಾಜಿಕ ಕಾರ್ಯಕರ್ತ ಇರ್ಷಾದ್ ಯು.ಟಿ ಉಪ್ಪಿನಂಗಡಿ ಸೇರಿದಂತೆ ಹಲವು ಗಣ್ಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.
“Care Beyond Prescription” ಎಂಬ ಧ್ಯೇಯವಾಕ್ಯದೊಂದಿಗೆ ಆರಂಭಗೊಂಡಿರುವ ಲೈಫ್ ಕೇರ್ ಮೆಡಿಕಲ್ಸ್, ಗ್ರಾಹಕರಿಗೆ ಗುಣಮಟ್ಟದ ಔಷಧ ಸೇವೆ ಹಾಗೂ ಉತ್ತಮ ಆರೋಗ್ಯ ಆರೈಕೆಯನ್ನು ಒದಗಿಸುವ ಉದ್ದೇಶ ಹೊಂದಿದೆ ಎಂದು ಸಂಸ್ಥೆಯ ಮಾಲಕರಾದ ಸಫ್ವಾನ್ ಪಿಲಿಕಲ್ ಮತ್ತು ಉಮರಬ್ಬ ಪಿಲಿಕಲ್ ರವರು ತಿಳಿಸಿದರು.
ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರು ಸಂಸ್ಥೆಯ ಯಶಸ್ಸಿಗೆ ಶುಭ ಹಾರೈಸಿದರು. ಕುಟುಂಬ ಸದಸ್ಯರು, ಸ್ನೇಹಿತರು, ಹಿತೈಷಿಗಳು ಹಾಗೂ ಸಾರ್ವಜನಿಕರ ಪ್ರಾರ್ಥನೆ ಮತ್ತು ಶುಭಾಶಯಗಳೊಂದಿಗೆ ಲೈಫ್ ಕೇರ್ ಮೆಡಿಕಲ್ಸ್ ತನ್ನ ಸೇವಾ ಪಯಣವನ್ನು ಆರಂಭಿಸಿತು.




