March 22, 2026

ಜೂನಿಯರ್ ಕಾಲೇಜು ಸಮೀಪ ಅಕ್ರಮ ಮದ್ಯ ವಶ:
ಆರೋಪಿಗೆ ನ್ಯಾಯಾಂಗ ಬಂಧನ

0
arrest.jpg

ಸುಳ್ಯ: ಜೂನಿಯರ್ ಕಾಲೇಜು ಬಳಿಯ ಮನೆಯೊಂದರ ಸಮೀಪ ಜೀಪಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 53,700 ರೂ. ಮೌಲ್ಯದ ಮದ್ಯವನ್ನು ಸುಳ್ಯ ಪೊಲೀಸರು ದ.28 ರಂದು ವಶಪಡಿಸಿಕೊಂಡಿದ್ದಾರೆ.

ಆರೋಪಿ ಡಿನೋಹಿ ಎಂಬುವರನ್ನು ಪೊಲೀಸರು ಸೆರೆಹಿಡಿದಿದ್ದು, ಉಳಿದ ಇಬ್ಬರು ಆರೋಪಿಗಳಾದ ಜ್ಞಾನಪ್ರಕಾಶ್ ಅಲಿಯಾಸ್ ಸಲಾಂ ಹಾಗೂ ಡಯಾನ ಎಂಬುವವರು ತಪ್ಪಿಸಿಕೊಂಡಿರುವುದಾಗಿ ಪೋಲೀಸರು ತಿಳಿಸಿದ್ದಾರೆ.

ಆರೋಪಿ ಡಿನೋಹಿ ಎಂಬವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದರೆಂದು ತಿಳಿದುಬಂದಿದೆ.
ಬಂಧಿತನಿಂದ 172.800 ಎಂ ಎಲ್ ಮಧ್ಯದ 20 ಬಾಕ್ಸ್, ಹಾಗೂ ಒಂದು ಜೀಪು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!