September 4, 2026

ಮಂಗಳೂರು: ಆನ್‌ಲೈನ್‌ ಫ್ಲಾಟ್‌ಪಾರ್ಮ್‌ನಿಂದ ಖರೀದಿ ಮಾಡಿದ ಮೊಟ್ಟೆಯಲ್ಲಿ ಹುಳು ಪತ್ತೆ: ಆಹಾರ ಸುರಕ್ಷತೆ ಅಧಿಕಾರಿಗಳ ದಾಳಿ

0
IMG-20260904-WA0028

ಮಂಗಳೂರು: ಮಂಗಳೂರಿನಲ್ಲಿ ಆಹಾರ ಸುರಕ್ಷತೆ ಅಧಿಕಾರಿಗಳ ದಾಳಿ ಮುಂದುವರಿದಿದೆ. ಗ್ರಾಹಕರೊಬ್ಬರು ಬ್ಲಿಂಕ್‌ ಇಟ್‌ ಆನ್‌ಲೈನ್‌ ಫ್ಲಾಟ್‌ಪಾರ್ಮ್‌ನಿಂದ ಮೊಟ್ಟೆ ಖರೀದಿಸಿದ್ದು, ಅದರಲ್ಲಿ ಮೊಟ್ಟೆ ಒಡೆದು ಹುಳ ಇರುವುದು ಕಂಡುಬಂದಿದೆ. ಈ ಬಗ್ಗೆ ಗ್ರಾಹಕರೋರ್ವರು ಆರೋಗ್ಯ ಸಚಿವ ಯು. ಟಿ. ಖಾದರ್‌ ಅವರ ಗಮನಕ್ಕೆ ತಂದಿದ್ದಾರೆ.

ಪಳ್ನೀರ್‌ನಲ್ಲಿರುವ ಬ್ಲಿಂಕ್‌ ಇಟ್ ಆನ್‌ಲೈನ್‌ ಮಾರಾಟ ಮಳಿಗೆಗೆ ಆಹಾರ ಸುರಕ್ಷತೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಒಡೆದ ಮೊಟ್ಟೆ ಇರುವಂತಹ ಪ್ಯಾಕೆಟ್‌ಗಳನ್ನು ಅಲ್ಲಿ ಪತ್ತೆ ಮಾಡಲಾಗಿದ್ದು, ಕೂಡಲೇ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.

ಆಹಾರ ಸಾಮಗ್ರಿ ಸಂಗ್ರಹಣಾಗಾರವನ್ನುಸಂಪೂರ್ಣವಾಗಿ ಸ್ವಚ್ಛಗೊಳಿಸುವ ಉದ್ದೇಶದಿಂದ ಮಳಿಗೆಯ ಸಂಗ್ರಹಣ ಕೋಣೆಯನ್ನು ತಾತ್ಕಾಲಿಕವಾಗಿ ಮುಚ್ಚಿಸಿ ಸೀಲ್ ಮಾಡಲಾಯಿತು. ನೋಟಿಸ್ ನೀಡಿ ಸೂಕ್ತ ಸಮಜಾಯಿಸಿ ನೀಡಲು ಸೂಚಿಸಲಾಯಿತು.

Leave a Reply

Your email address will not be published. Required fields are marked *

error: Content is protected !!