ಕಾನ್ಪುರದಲ್ಲಿ ತರಬೇತಿ ವಿಮಾನ ಪತನ: ಉಡುಪಿ ಮೂಲದ ಟ್ರೈನಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು
ಉಡುಪಿ: ಉತ್ತರಪ್ರದೇಶದ ಕಾನ್ಪುರದಲ್ಲಿ ಆ.27ರಂದು ಖಾಸಗಿ ತರಬೇತಿ ವೇಳೆ ವಿಮಾನ ಪತನಗೊಂಡು ಉಡುಪಿ ಮೂಲದ ಟ್ರೈನಿ ಪೈಲಟ್ ಮೃತಪಟ್ಟಿದ್ದಾರೆ.
ಅಭಿಷೇಕ್ ಪೂಜಾರಿ(22) ಎಂಬವರು ಮೃತ ಟ್ರೈನಿ ಪೈಲಟ್. ಇವರು ಪ್ರಸ್ತುತ ಮುಂಬೈನಲ್ಲಿ ವಾಸವಾಗಿರುವ ಮೂಲತಃ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕಣಜಾರು ಗ್ರಾಮದ ಕಡೇಬೆರ್ಕೆ ಮೂಲದ ಪ್ರಭಾಕರ ಪೂಜಾರಿ ಹಾಗೂ ಶಶಿಕಲ ಪೂಜಾರಿ ದಂಪತಿಯ ಪುತ್ರ.
ಅಭಿಷೇಕ್ ಅವರು ಉತ್ತರಪ್ರದೇಶದ ಕಾನ್ಪುರದಲ್ಲಿ ಸುಮಾರು ಎರಡೂವರೆ ವರ್ಷದಿಂದ ಖಾಸಗಿ ಟ್ರೈನಿ ಪೈಲೆಟ್ ಆಗಿ ತರಬೇತಿ ಪಡೆಯುತ್ತಿದ್ದರು. ಇವರ ತಂದೆ ಪ್ರಭಾಕರ ಪೂಜಾರಿ ತಾಯಿ ಶಶಿಕಲಾ ಪೂಜಾರಿ ಮುಂಬೈನಲ್ಲಿ ವಾಸ್ತವ್ಯವಿದ್ದಾರೆ.





