October 16, 2026

ಇರಾನ್ ವಿರುದ್ಧದ ಆರ್ಥಿಕ ನಿರ್ಬಂಧ: ಭಾರತ ಮೂಲದ 4 ಸಂಸ್ಥೆಗಳು, 3 ಭಾರತೀಯರ ಮೇಲೆ ಅಮೇರಿಕಾ ನಿಷೇಧ ಹೇರಿಕೆ

0
IMG-20260826-WA0019

ವಾಷಿಂಗ್ಟನ್: ಇರಾನ್‌ನಿಂದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡ ಕಾರಣಕ್ಕಾಗಿ ಭಾರತ ಮೂಲದ ನಾಲ್ಕು ಕಂಪನಿಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

ಇರಾನ್‌ನ ಎಲ್ಲ ಆರ್ಥಿಕ ಮೂಲಗಳಿಗೆ ತಡೆ ಹಾಕುವ ನಿಟ್ಟಿನಲ್ಲಿ ನಿರ್ಬಂಧಗಳೂ ಸೇರಿದಂತೆ ‘ಆರ್ಥಿಕ ಬಹಿಷ್ಕಾರ ಕಾರ್ಯಾಚರಣೆ’ಯನ್ನು ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ಸೋಮವಾರ ಘೋಷಿಸಿದ್ದಾರೆ.

ಅಲ್ಲದೆ, ಇರಾನ್ ಜೊತೆಗಿನ ಆರ್ಥಿಕ ವ್ಯವಹಾರವನ್ನು ಮುಂದುವರಿಸುವ ದೇಶಗಳು ಪ್ರತೀಕಾರದ ಕ್ರಮಗಳನ್ನು ಎದುರಿಸಲು ಸನ್ನದ್ಧರಾಗಬೇಕು ಎಂದೂ ಎಚ್ಚರಿಸಿದ್ದಾರೆ.

‘ಪೊರ್ಟೀಸ್ ಪಾರ್ಟ್‌ನರ್ ಎಲ್‌ಎಲ್‌ಪಿ, ಸದಾಶಿವ ಓವರ್‌ಸೀಸ್ ಲಿಮಿಟೆಡ್, ಪಿಪಿ ಸಾಫ್ಟ್‌ಟೆಕ್ ಪ್ರೈ.ಲಿ., ಪ್ರಕೃತೀಸ್ ಇನ್ಫ್ರಾ ಇಂಪೆಕ್ಸ್ ಪ್ರೈ.ಲಿ. – ಇವು ನಿರ್ಬಂಧಕ್ಕೆ ಒಳಗಾದ ಕಂಪನಿಗಳು. ಈ ಸಂಸ್ಥೆಗಳು ತಿಳಿವಳಿಕೆ ಇದ್ದೂ ವ್ಯವಹಾರಗಳನ್ನು ಮುಂದುವರಿಸಿದ್ದವು’ ಎಂದು ಪ್ರಕಣೆಯಲ್ಲಿ ತಿಳಿಸಲಾಗಿದೆ. ಇವುಗಳ ಜೊತೆಗೆ, ಈ ಕಂಪನಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಪೋರ್ಟ್-ಈಸ್ ಸಂಸ್ಥೆಯ ಪಾಲುದಾರರಾದ ಹರೀಶ್ ರಾಮಚಂದ್ರ ರಂಗಿ ಮತ್ತು ಇದ್ರಿಸ್‌ಮಿಯಾ ಅಶ್ರಫ್‌ಮಿಯಾ ಶೇಖ್ ಹಾಗೂ ಪಿಪಿ ಸಾಫ್ಟ್‌ಟೆಕ್‌ನ ಪ್ರಶಾಂತ್ ಗರ್ಗ್ ಎಂಬ ಮೂವರು ಭಾರತೀಯರ ಮೇಲೆಯೂ ಅಮೆರಿಕದ ವಿದೇಶಾಂಗ ಇಲಾಖೆ ನಿರ್ಬಂಧ ವಿಧಿಸಿದೆ.

ಇರಾನ್‌ನ ಆರ್ಥಿಕ ಜೀವನಾಡಿಗಳನ್ನು ಕತ್ತರಿಸುವ ಅಭೂತಪೂರ್ವ ಅಭಿಯಾನ ಇದಾಗಿದೆ. ಆ ದೇಶದೊಂದಿಗೆ ವ್ಯವಹರಿಸುವ ರಾಷ್ಟ್ರಗಳು, ಉದ್ಯಮಗಳು ಮತ್ತು ಸಂಸ್ಥೆಗಳ ಮೇಲಿನ ದ್ವಿತೀಯ ಹಂತದ ನಿರ್ಬಂಧಗಳನ್ನು ವಿಸ್ತರಿಸಲಾಗುತ್ತದೆ’ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

error: Content is protected !!