August 23, 2026

ಮಂಗಳೂರು: ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಯುವಕ ಮೃತ್ಯು

0
image_editor_output_image-1483291993-1787500574003

ಮಂಗಳೂರು: ಫುಟ್ಬಾಲ್ ಹೆಕ್ಕಲು ನದಿಗಿಳಿದ ಯುವಕ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಗರ ಹೊರವಲಯದ ಕಸಬಾ ಬೆಂಗ್ರೆಯ ಫೆರಿ ಪಾಯಿಂಟ್ ಬಳಿ ರವಿವಾರ ಸಂಜೆ ನಡೆದಿದೆ

ಮೃತಪಟ್ಟ ಯುವಕನನ್ನು ಕಸಬಾ ಬೆಂಗರೆಯ ಮುಹಮ್ಮದ್ ಸಾಲಿ-ಝಹುರಾ ದಂಪತಿಯ ಪುತ್ರ ಮುಹಮ್ಮದ್ ಸನಾವುಲ್ಲಾ (25) ಎಂದು ಗುರುತಿಸಲಾಗಿದೆ.

ಫೆರಿ ಪಾಯಿಂಟ್ ಬಳಿ ಮಕ್ಕಳು ಫುಟ್ಬಾಲ್ ಆಡುತ್ತಿದ್ದ ವೇಳೆ ಚೆಂಡು ನದಿಗೆ ಬಿದ್ದಿತ್ತು. ಅದನ್ನು ಹೆಕ್ಕಿ ಕೊಡುವ ಸಲುವಾಗಿ ಮುಹಮ್ಮದ್ ಸನಾವುಲ್ಲಾ ನದಿಗೆ ಇಳಿದಿದ್ದು, ಈ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಈ ವಿಚಾರವನ್ನು ತಿಳಿದುಕೊಂಡ ಬಳಿಕ ಸ್ಥಳೀಯರು ಹುಡುಕಾಟ ಆರಂಭಿಸಿದರು. ಹಾಗೇ ಸನಾವುಲ್ಲಾ ಅವರನ್ನು ಮೇಲಕ್ಕೆತ್ತಿ ಪ್ರಥಮ ಚಿಕಿತ್ಸೆ ನೀಡಿ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!