August 23, 2026

ವಿಟ್ಲ: ಸತತ 5ನೇ ಬಾರಿಗೆ ಸಾಧನಾ ಪ್ರಶಸ್ತಿ ಪಡೆದ ವಿಟ್ಲ ಗ್ರಾಮೀಣ ಸಹಕಾರಿ ಸಂಘ

0
image_editor_output_image-150148050-1787465907581

ದಿನಾಂಕ 22-08-2026 ನೇ ಶನಿವಾರ ನಡೆದ ಎಸ್ ಸಿ ಡಿ ಸಿ ಸಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ ವಿಟ್ಲ ಸಹಕಾರಿ  ಸಂಘವು ಸತತ 5 ನೇ ಬಾರಿಗೆ ಸಾಧನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.


2025-26 ನೇ ಆರ್ಥಿಕ ಸಾಲಿನಲ್ಲಿ ನಮ್ಮ ಸಂಘವು ರೂ. 1088 ಕೋಟಿ ವ್ಯವಹಾರ, ರೂ. 149. 84 ಕೋಟಿ ಠೇವಣಿ, ರೂ.125.63 ಕೋಟಿ ಸಾಲ ಹಾಗೂ ರೂ. 4.04 ಕೋಟಿ ಲಾಭವನ್ನು ಗಳಿಸಿ,ಅಭೂತಪೂರ್ವ ಸಾಧನೆಯನ್ನು ಮಾಡಿ ಈ ಪ್ರಶಸ್ತಿಯನ್ನು ತನ್ನದಾಗಿಸಿಕೊಡಿದೆ.


ಈ ಸಂಧರ್ಭದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕಿನ ಅಧ್ಯಕ್ಷರಾದ ಡಾ| ಎಂ ಎನ್ ರಾಜೇಂದ್ರ ಕುಮಾರ್ ರವರು ಸಂಘದ ಅಧ್ಯಕ್ಷರಾದ ಶ್ರೀ ಎಚ್ ಜಗನ್ನಾಥ ಸಾಲಿಯಾನ್ ಹಾಗೂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶಾಮ್ ಕೆ ಯವರನ್ನು ಸಭೆಯಲ್ಲಿ ಸನ್ಮಾನಿಸಿದರು.


ಈ ಸುಸಂದರ್ಭದಲ್ಲಿ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀ ಎಚ್ ಎನ್ ರಮೇಶ್ ,ಸಂಘದ ನಿರ್ದೇಶಕರುಗಳಾದ ಶ್ರೀ ವಿಶ್ವನಾಥ ಎಂ ಶ್ರೀ ದಯಾನಂದ ಆಳ್ವ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!