September 22, 2026

ಮಂಗಳೂರು: ಸ್ಕೂಟರ್‌ನಲ್ಲಿ ಅಪಾಯಕಾರಿಯಾಗಿ ಸ್ಟಂಟ್: ಯುವಕನಿಗೆ 7,000 ರೂ. ದಂಡ

0
Screenshot_20260716-120008

ಮಂಗಳೂರು: ಸ್ಕೂಟರ್‌ನಲ್ಲಿ ಅಪಾಯಕಾರಿಯಾಗಿ ಸ್ಟಂಟ್ ಮಾಡುತ್ತಾ ಸವಾರಿ ಮಾಡುತ್ತಿದ್ದ ಯುವಕನಿಗೆ ಮಂಗಳೂರು ನಗರ ಸಂಚಾರ ಪೊಲೀಸರು 7,000 ರೂ. ದಂಡ ವಿಧಿಸಿದ್ದಾರೆ.

ಕೊಣಾಜೆ ಬಳಿ ವಿದ್ಯಾರ್ಥಿಯೊಬ್ಬ ಕಳೆದ ಮಾರ್ಚ್‌ನಲ್ಲಿ ರಸ್ತೆಯಲ್ಲಿ ಸ್ಟಂಟ್ ಮಾಡಿದ್ದನು. ಇದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

 

ಇದನ್ನು ಗಮನಿಸಿದ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸಿದ್ದಾರೆ. ಅಷ್ಟೇ ಅಲ್ಲದೆ, ಆತನ ಚಾಲನಾ ಪರವಾನಗಿ (DL) ರದ್ದುಗೊಳಿಸುವಂತೆ ಸಾರಿಗೆ ಪ್ರಾಧಿಕಾರಕ್ಕೆ ಶಿಫಾರಸು ಮಾಡಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!