July 16, 2026

ಪುತ್ತೂರಿನ ಪಿಕ್ಸೆಲ್ ಕ್ರಿಯೇಟಿವ್ಸ್‌ ಸಂಸ್ಥೆಯಶಸ್ವಿ 9 ನೇ ವರ್ಷಕ್ಕೆ ಪಾದಾರ್ಪಣೆ: ಗುಣಮಟ್ಟದ ಎಲ್ಇಡಿ ಪರದೆಗಳನ್ನು ಒದಗಿಸುತ್ತಿರುವ ಸಂಸ್ಥೆ

0
image_editor_output_image-1080671536-1784178034891


ಗುಣಮಟ್ಟದ ಎಲ್‌ಇಡಿ ವ್ಯವಸ್ಥೆ
ಪಿಕ್ಸೆಲ್‌ ಕ್ರಿಯೇಟಿವ್ಸ್‌ ಸಂಸ್ಥೆಯು ಗುಣಮಟ್ಟದ ಎಲ್‌ಇಡಿ ಪರದೆಗಳನ್ನು ಒದಗಿಸುತ್ತಿದ್ದು, ಕಾರ್ಯಕ್ರಮಗಳಿಗೆ ತಕ್ಕಂತೆ ಇಂಡೋರ್‌ ಮತ್ತು ಔಟ್‌ಡೋರ್‌ ಎಲ್‌ಇಡಿ ವಿಡಿಯೋ ವಾಲ್‌ಗಳು ನಮ್ಮಲ್ಲಿವೆ ಎಂದು ಮಾಲಕ ಪ್ರಜ್ವಲ್‌ ಪುತ್ತೂರು ತಿಳಿಸಿದ್ದಾರೆ.

ಪುತ್ತೂರು : ಪುತ್ತೂರಿನಲ್ಲಿ ಸತತವಾಗಿ ೮ ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಜ್ವಲ್ ಪುತ್ತೂರು ಮಾಲಕತ್ವದ ಪಿಕ್ಸೆಲ್ ಕ್ರಿಯೇಟಿವ್ಸ್‌ ಸಂಸ್ಥೆಯು ಜು. ೧೬ ರಂದು ಯಶಸ್ವಿ ೯ ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.
ಎಲ್ಇಡಿ ವಿಡಿಯೋ ವಾಲ್, ಟಿವಿ, ಪ್ರೊಜೆಕ್ಟರ್, ವಿಡಿಯೋಗ್ರಾಫಿ, ಮಾಧ್ಯಮ ನೇರಪ್ರಸಾರಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆ ಹಾಗೂ ಲೈವ್ ವೀಡಿಯೊ ಮಿಕ್ಸಿಂಗ್ ಇತ್ಯಾದಿ ಗುಣಮಟ್ಟದ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ.
ಮದುವೆ, ರಿಷೆಪ್ಷನ್‌, ಮೆಹಂದಿ, ಸಂಗೀತ, ನೃತ್ಯ, ವಾರ್ಷಿಕೋತ್ಸವ, ಸಮಾವೇಶಗಳಂತಹ ಕಾರ್ಯಕ್ರಮಗಳಲ್ಲಿ ವಿಶಾಲ ಸಭಾಂಗಣದಲ್ಲಿ ವೇದಿಕೆಯ ಕಾರ್ಯಕ್ರಮದ ದೃಶ್ಯಗಳನ್ನು ಸಭಾಂಗಣದ ತುತ್ತತುದಿಯವರೆಗೂ ತಲುಪಿಸುವಲ್ಲಿ ಎಲ್‌ಇಡಿ ವಾಲ್‌ಗಳು ಬಹು ಉಪಯೋಗಿಯಾಗಿವೆ. ಅಲ್ಲದೇ ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಸ್ಟೇಜ್‌ ಎಲ್‌ಇಡಿ ವಾಲ್‌ ಗಳು ಕಾರ್ಯಕ್ರಮದ ಮೆರುಗು ಹೆಚ್ಚಿಸುತ್ತಿದೆ. ಪುತ್ತೂರು ಅಲ್ಲದೇ ದ.ಕ., ಉಡುಪಿ, ಕಾಸರಗೋಡು ಸೇರಿದಂತೆ ರಾಜ್ಯದ ವಿವಿಧ ಕಡೆ ಪಿಕ್ಸೆಲ್‌ ಸಂಸ್ಥೆಯ ವತಿಯಿಂದ ಎಲ್‌ಇಡಿ ವಾಲ್‌, ಲೈವ್‌ ತಾಂತ್ರಿಕ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತಿದೆ.

Leave a Reply

Your email address will not be published. Required fields are marked *

You may have missed

error: Content is protected !!