ಪ್ರಿಯಕರನ ಜೊತೆ ಸಲುಗೆ ಬೆಳೆಸಿದ ಗೆಳತಿಯ ಖಾಸಗಿ ಫೋಟೋ ವೈರಲ್ ಬೆದರಿಕೆ: ಪ್ರಿಯತಮೆ ಬಂಧನ
ಬೆಂಗಳೂರು: ಬಾಯ್‌ಫೆಂಡ್ ಜೊತೆ ಸಲುಗೆ ಬೆಳೆಸಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹೋದ ಮಹಿಳೆ ಈಗ ಜೈಲು ಸೇರಿದ್ದಾಳೆ. ತನ್ನ ಸ್ನೇಹಿತೆಯ ಖಾಸಗಿ ಫೋಟೋಗಳನ್ನ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಶ್ವೇತಾ ಎಂಬ ಮಹಿಳೆ ಬಂಧಿತ ಆರೋಪಿ. ಶ್ವೇತಾಳ ಬಾಯ್‌ಫ್ರೆಂಡ್ ಜೊತೆ ಆಕೆಯ ಸ್ನೇಹಿತೆ ಸಲುಗೆಯಿಂದ ಇದ್ದಳು. ಇದು ಇಬ್ಬರ ವೈಯಕ್ತಿಕ ಜಗಳಕ್ಕೆ ಕಾರಣವಾಗಿದೆ. ತನ್ನ ಬಾಯ್‌ಫ್ರೆಂಡ್ ಸ್ನೇಹಿತೆಯ ಜೊತೆಗೆ ಇರುವ ಫೋಟೋ ಕಂಡ ಶ್ವೇತ, ಆಕೆಯೊಂದಿಗೆ ಜಗಳವಾಡಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದೇ, ಸ್ನೇಹಿತೆ ವಿರುದ್ಧ ಸೇಡು ತೀರಿಸಿಕೊಳ್ಳಳು ಬಾಯ್‌ಫ್ರೆಂಡ್ ಫೋನ್‌ನಲ್ಲಿದ್ದ ಫೋಟೋಗಳನ್ನ ಕಳವು ಮಾಡಿದ್ದಾಳೆ. ಕದ್ದ ಖಾಸಗಿ ಫೋಟೋಳನ್ನ ಸ್ನೇಹಿತೆಯ ಗಂಡನಿಗೆ ಕಳಿಸಿ, ಸಂಸಾರದಲ್ಲಿ ಹುಳಿ ಹಿಂಡಿದ್ದಾಳೆ.
ಇದರಿಂದ ಶ್ವೇತಾ ಸ್ನೇಹಿತೆ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಇಷ್ಟಕ್ಕೆ ಸುಮ್ಮನಾಗದ ಶ್ವೇತಾ, ಇನ್ನಷ್ಟು ಫೋಟೋಳಿವೆ, ವೈರಲ್ ಮಾಡೋದಾಗಿಯೂ ಬೆದರಿಕೆ ಹಾಕಿದ್ದಾಳೆ. ಕೂಡಲೇ ಮಹಿಳೆಯ ಪತಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಅನ್ವಯ ಐಟಿ ಕಾಯ್ದೆ ಅಡಿ ಕೇಸ್ ದಾಖಲಿಸಿಕೊಂಡ ಪೊಲೀಸರು ಶ್ವೇತಾಳನ್ನ ಬಂಧಿಸಿದ್ದಾರೆ. ತನಿಖೆ ವೇಳೆ ಶ್ವೇತಾಳ ಮೊಬೈಲ್‌ನಲ್ಲಿ ಹಲವು ಅಶ್ಲೀಲ ಫೋಟೋಗಳು ಪತ್ತೆಯಾಗಿವೆ. ಕೆಲ ರಾಜಕಾರಣಿಗಳು ಫೋಟೋಗಳಲ್ಲಿದ್ದಾರಂತೆ. ಮುಂದಿನ ವಿಚಾರಣೆ ಕೈಗೊಂಡಿರುವ ಚಾಮರಾಜಪೇಟೆ ಪೊಲೀಸ್ರು ಶ್ವೇತಾಳ ಹಿನ್ನೆಲೆ ಕೆದಕುತ್ತಿದ್ದಾರೆ.




