April 1, 2026

ಮೂಡುಬಿದಿರೆ: ಭೀಕರ ರಸ್ತೆ ಅಪಘಾತ: ತಾಯಿ, ಮಗ ಇಬ್ಬರೂ ಸಾವು

0
image_editor_output_image-1286437025-1775024088007.jpg

ಮೂಡುಬಿದಿರೆ: ಭೀಕರ ರಸ್ತೆ ಅಪಘಾತದಲ್ಲಿ ತಾಯಿ ಮತ್ತು ಮಗ ಇಬ್ಬರೂ ಸಾವನ್ನಪ್ಪಿದ ದಾರುಣ ಘಟನೆ ಮೂಡುಬಿದಿರೆ ಸಮೀಪದ ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಸಂಜೆ ನಡೆದಿದೆ.

ಮೃತರನ್ನು ಮೂಡುಬಿದಿರೆ ತಾಲೂಕಿನ ಗಂಟಾಲ್ಕಟ್ಟೆ ನೀರಲ್ಕೆ ನಿವಾಸಿಗಳಾದ ಪ್ರೇಮಾ ಮತ್ತು ಅವರ ಪುತ್ರ ಸೀನ ಎಂದು ಗುರುತಿಸಲಾಗಿದೆ.

ಮೂಡುಬಿದಿರೆಯಿಂದ ಗಂಟಾಲ್ಕಟ್ಟೆ ಕಡೆಗೆ ತಾಯಿ-ಮಗ ಇಬ್ಬರೂ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಟ್ರಕ್‌ನ ಹಿಂಭಾಗಕ್ಕೆ ಇವರ ಬೈಕ್ ವೇಗವಾಗಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಪ್ರೇಮಾ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಸೀನ ಅವರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಮೃತಪಟ್ಟಿದ್ದಾರೆ.

ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!