ಇರಾನ್ ವಿರುದ್ಧ ಕದನ ವಿರಾಮ ಬೇಡ ಯುದ್ಧ ಮುಂದುವರಿಸಿ: ಟ್ರಂಪ್ ಮೇಲೆ ಮತ್ತೆ ಒತ್ತಡ ಹಾಕಿದ ಮೊಹಮ್ಮದ್ ಬಿನ್ ಸಲ್ಮಾನ್
ವಾಷಿಂಗ್ಟನ್: ಇರಾನ್ ವಿರುದ್ಧ ಕದನ ವಿರಾಮ ಬೇಡ ಯುದ್ಧ ಮುಂದುವರಿಸುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಮತ್ತೆ ಒತ್ತಡ ಹೇರುತ್ತಿದ್ದಾರೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿರುವುದಾಗಿ ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
ಕಳೆದ ಕೆಲವು ವಾರಗಳಿಂದ ಟ್ರಂಪ್ ಅವರೊಂದಿಗೆ ಹಲವು ಬಾರಿ ಮಾತನಾಡಿರುವ ಸಲ್ಮಾನ್, ಇರಾನ್ ಆಡಳಿತ ಉರುಳುವವರೆಗೂ ಸಮರವನ್ನು ಮುಂದುವರಿಸಬೇಕು ಎಂಬುದಾಗಿ ಬಲವಂತ ಮಾಡಿದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಸ್ರೇಲ್ ಹಾಗೂ ಅಮೆರಿಕ ಪಡೆಗಳು, ಇರಾನ್ ಮೇಲೆ ಫೆಬ್ರುವರಿ 28ರಂದು ಜಂಟಿ ದಾಳಿ ಮಾಡಿದ್ದವು. ದಾಳಿ ವೇಳೆ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೇರಿದಂತೆ ಹಲವರು ಹತ್ಯೆಯಾಗಿದ್ದರು. ಇದರಿಂದ ಕೆರಳಿರುವ ಇರಾನ್, ಪ್ರತಿದಾಳಿ ಆರಂಭಿಸಿದೆ. ಅಮೆರಿಕದ ನೆಲೆಗಳಿರುವ ರಾಷ್ಟ್ರಗಳ ಮೇಲೂ ದಾಳಿ ಆರಂಭಿಸಿದೆ.
‘ದೇಶದ ಪಾಲಿಗೆ ಇರಾನ್ ದೀರ್ಘ ಸಮಯದವರೆಗೆ ಬೆದರಿಕೆಯಾಗಿಯೇ ಉಳಿಯಲಿದೆ. ಯುದ್ಧ ಮುಕ್ತಾಯವಾದ ಬಳಿಕವೂ, ಸೌದಿ ಅರೇಬಿಯಾವನ್ನು ಗುರಿಯಾಗಿಸಿ ಹಡಗು ಸಾಗಣೆಗೆ ಬೆದರಿಕೆಗಳನ್ನು ಮುಂದುವರಿಸುವ ಸಾಧ್ಯತೆ ಇದೆ’ ಎಂಬುದು ಸಲ್ಮಾನ್ ಅವರ ಅಭಿಪ್ರಾಯವಾಗಿದೆ ಲಾಗಿದೆ.




