March 23, 2026

ಉಡುಪಿ: ಟೆಂಪೋ ಬೈಕ್ ಗೆ ಮುಖಾಮುಖಿ ಢಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು

0
image_editor_output_image-502014427-1774267070076.jpg

ಉಡುಪಿ: ಟೆಂಪೋ ಬೈಕ್ ಗೆ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಸ್ಥಳದಲ್ಲೆ ಸಾವನಪ್ಪಿದ ಘಟನೆ ಮಣಿಪಾಲದ ಆತ್ರಾಡಿಯ ಕಬ್ಯಾಡಿ ಅರ್ಮಾನ್ ರ್ಯಾಟ್ ಫ್ಯಾಕ್ಟರಿ ಬಳಿ ಸೋಮವಾರ ಸಂಭವಿಸಿದೆ.

ಮೃತರನ್ನು ಹೆರ್ಗ ಗ್ರಾಮದ ನಿವಾಸಿ ಭಾಸ್ಕರ್ ನಾಯ್ಕ್ (70) ಎಂದು ಗುರುತಿಸಲಾಗಿದೆ. ಆತ್ರಾಡಿಯಿಂದ ಮೂಡುಬೆಳ್ಳೆ ಕಡೆಗೆ ಹೋಗುತ್ತಿದ್ದ 407 ಟೆಂಪೋ, ಎದುರು ದಿಕ್ಕಿನಿಂದ ಬರುತ್ತಿದ್ದ ಬೈಕ್‌ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ವಾಹನ ಸಮೇತ ರಸ್ತೆಗೆ ಎಸೆಯಲ್ಪಟ್ಟರು. ಗಂಭೀರ ಗಾಯಗೊಂಡ ಭಾಸ್ಕರ್ ನಾಯ್ಕ್ ಸ್ಥಳದಲ್ಲೇ ಮೃತಪಟ್ಟರು. ಹಿಂಬದಿ ಸವಾರನ ಗಂಭೀರವಾಗಿ ಗಾಯಗೊಂಡಿದ್ದ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ತಲುಪಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!