March 23, 2026

ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರಿನಲ್ಲಿ ಮುಳುಗಿ ಸಾವು

0
image_editor_output_image459667265-1774248363091.jpg

ವಿಜಯನಗರ: ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಸಹೋದರರು ನೀರು ಪಾಲಾದ ಘಟನೆ ಹರಪನಹಳ್ಳಿ ತಾಲೂಕಿನ ಹಲವಾಗಲು ಬಳಿ ನಡೆದಿದೆ.

ಮೃತರನ್ನು ಎಂ.ಜಿ.ಮನು(19) ಮತ್ತು ಎಂ.ಜಿ.ಪ್ರಜ್ವಲ್(18) ಎಂದು ಗುರುತಿಸಲಾಗಿದೆ. ನದಿಯಲ್ಲಿ ಮುಳುಗುತ್ತಿದ್ದ ಕಿರಿಮಗ ಚಿರಂಜೀವಿಯನ್ನ ತಂದೆ ಮಂಜಪ್ಪ ರಕ್ಷಿಸಿದ್ದಾರೆ. ಹಲವಾಗಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದ ಬಳಿಯ ತುಂಗಭದ್ರ ನದಿಗೆ ಮೂವರು ಸಹೋದರರು ಕೆರೆಗೆ ಈಜಾಡಲು ಹೋಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ.

ತಂದೆ ಕಣ್ಣೆದುರೇ ಇಬ್ಬರು ಮಕ್ಕಳು ಜಲ ಸಮಾಧಿಯಾಗಿದ್ದಾರೆ. ಇನ್ನೊಬ್ಬ ಮಗನನ್ನು ರಕ್ಷಿಸಲಾಗಿದೆ. ಮೃತ ಎಂ.ಜಿ.ಮನು ಬಿಇ ವಿದ್ಯಾರ್ಥಿಯಾಗಿದ್ದು, ಎಂ.ಜಿ.ಪ್ರಜ್ವಲ್ ಪಿಯು ಓದುತ್ತಿದ್ದ. ಸದ್ಯ ತುಂಗಭದ್ರಾ ನದಿಯಿಂದ ಸ್ಥಳೀಯರು ಇಬ್ಬರ ಶವ ಹೊರತೆಗೆದಿದ್ದಾರೆ. ಘಟನಾ ಸ್ಥಳದಲ್ಲಿ ಪೋಷಕರು ಮತ್ತು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.

Leave a Reply

Your email address will not be published. Required fields are marked *

error: Content is protected !!