June 14, 2026

ಬೆದರಿಕೆ, ನಿಂದನೆ: Bigg Boss ಮಾಜಿ ಸ್ಪರ್ಧಿ ರಜತ್ ಕಿಶನ್ ವಿರುದ್ಧ ಎಫ್‌ಐಆರ್ ದಾಖಲು

0
image_editor_output_image70997248-1772839596056.jpg

ಬೆಂಗಳೂರು: Bigg Boss Kannada ಕಾರ್ಯಕ್ರಮದ ಮೂಲಕ ಜನಪ್ರಿಯತೆ ಪಡೆದ ಮಾಜಿ ಸ್ಪರ್ಧಿ Rajat Kishan ವಿರುದ್ಧ ಬೆದರಿಕೆ ಹಾಗೂ ನಿಂದನೆ ಆರೋಪದಡಿ ಬೆಂಗಳೂರಿನ KR Puram Police Station ನಲ್ಲಿ ಎಫ್‌ಐಆರ್ ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351(2) ಹಾಗೂ 352 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದಲ್ಲಿ ಎ1 ಆರೋಪಿಯಾಗಿ ರಜತ್ ಕಿಶನ್ ಮತ್ತು ಎ2 ಆರೋಪಿಯಾಗಿ ಕಿರಣ್ ಎಂಬವರನ್ನು ಗುರುತಿಸಲಾಗಿದೆ.

ಪೊಲೀಸರ ಮಾಹಿತಿಯ ಪ್ರಕಾರ, ದೂರುದಾರರಿಗೆ ಫೋನ್ ಕರೆ ಮೂಲಕ ಬೆದರಿಕೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ‘ಡಾಗ್ ಸತೀಶ್’ ಎಂಬ ವ್ಯಕ್ತಿಯೊಂದಿಗೆ ಇರುವ ಸ್ನೇಹವನ್ನು ಕಡಿದುಕೊಳ್ಳಬೇಕೆಂದು ಒತ್ತಡ ಹಾಕಲಾಗಿದ್ದು, ಅದಕ್ಕೆ ಒಪ್ಪದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!