ಕೇಂದ್ರ ಸರಕಾರದ ಪೆಟ್ರೋಲ್, ಡೀಸೆಲ್, ಆಟೋ ಎಲ್ ಪಿ ಜಿ ವಿರುದ್ಧ ಎಸ್ ಡಿ ಟಿ ಯು ವತಿಯಿಂದ ಬಿ.ಸಿ ರೋಡ್ ನಲ್ಲಿ ಪ್ರತಿಭಟನೆ
ಬಂಟ್ವಾಳ: ಕೇಂದ್ರ ಸರಕಾರದ ಪೆಟ್ರೋಲ್, ಡೀಸೆಲ್, ಆಟೋ ಎಲ್ ಪಿ ಜಿ ಹಾಗೂ ಇನ್ನಿತರ ದಿನಬಳಕೆಯ ವಸ್ತುಗಳ ವಿರುದ್ಧ ಪ್ರತಿಭಟನೆ ಇಂದು ಬಿ ಸಿ ರೋಡಿನ ಕೈಕಂಬದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಎಸ್ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ಸ ಸಮಿತಿಯ ಅಧ್ಯಕ್ಷರಾದ ಸಾಹುಲ್ ಹಮೀದ್ ಎಸ್ ಎಚ್, ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯರಾದ ಅಕ್ಬರ್ ಪೊನ್ನೋಡಿ ಇವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಸ್ ಡಿ ಟಿ ಯು ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಮಲಿಕ್, ಖಾದರ್ ಆಲಂಪಾಡಿ ಎಸ್ ಡಿ ಟಿ ಯು ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷರು , ಎಸ್ ಡಿ ಎ ಸಿ ಯು ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷರಾದ ಶಂಸುದ್ದೀನ್ ಪಲ್ಮ ಮಜಲ್ ಅಶ್ರಫ್ ಅಧ್ಯಕ್ಷರು ಟೆಂಪೋ ಯೂನಿಯನ್ ಕೈಕಂಬ.
ಕಾರ್ಯಕ್ರಮದ ಕೊನೆಯಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಸಂಶುದ್ದೀನ್ ಪಲ್ಲಮಜಲು ಸ್ವಾಗತಿಸಿ ಮಲಿಕ್ ಕೊಳಕೆ ಧನ್ಯವಾದಗೆಯ್ದರು. ಈ ಪ್ರತಿಭಟನೆಯಲ್ಲಿ ಆಟೋ ಚಾಲಕರು, ಟೆಂಪೋ ಚಾಲಕರು ಹಾಗೂ ಇನ್ನಿತರ ವಾಹನಚಾಲಕರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.